Alcohol Sales Karnataka : ಕರ್ನಾಟಕದಲ್ಲಿ ಮದ್ಯ ಮಾರಾಟದ (Alcohol Sale) ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿದಿದೆ.

ಕರ್ನಾಟಕದಲ್ಲಿ ಈ ವರ್ಷದ ಮದ್ಯ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಅಬಕಾರಿ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 2024ರಲ್ಲಿ 278.79 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.
ಪಾತಾಳಕ್ಕೆ ಕುಸಿದ ಬಿಯರ್ ಮಾರಾಟ
ಇನ್ನು 2025ರಲ್ಲಿ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಕೇವಲ 227.62 ಲಕ್ಷ ಬಾಕ್ಸ್ಗಳಷ್ಟೇ ಮಾರಾಟವಾಗಿದೆ. ಬರೋಬ್ಬರಿ 51.17 ಲಕ್ಷ ಬಾಕ್ಸ್ಗಳಷ್ಟು ಕುಸಿತವಾಗಿದೆ. ಒಂದು ಬಾಕ್ಸ್ನಲ್ಲಿ 7.80 ಲೀಟರ್ ಬಿಯರ್ ಇದೆ.
ರಮ್, ಜಿನ್ ಸೇರಿದಂತೆ ಎಲ್ಲ ಐಎಂಎಲ್ ಮದ್ಯ ಮಾರಾಟವೂ ಕುಸಿತ
ಬಿಯರ್ ಮಾತ್ರವಲ್ಲದೇ, ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿದಂತೆ ಎಲ್ಲ ಐಎಂಎಲ್ ಮದ್ಯ ಮಾರಾಟವೂ ಕಡಿಮೆಯಾಗಿದೆ. 2024ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 407.40 ಲಕ್ಷ ಬಾಕ್ಸ್ ಮಾರಾಟವಾಗಿದ್ದರೆ, 2025ರಲ್ಲಿ 403.04 ಲಕ್ಷ ಬಾಕ್ಸ್ಗಳಿಗೆ ಇಳಿಕೆಯಾಗಿದೆ. ಇದರಿಂದ 4.36 ಲಕ್ಷ ಬಾಕ್ಸ್ ಮದ್ಯ ಮಾರಾಟ ಕುಸಿತವಾಗಿದೆ (ಒಂದು ಬಾಕ್ಸ್ಗೆ 8.64 ಲೀಟರ್). ಕಳೆದ ಮೂರು ವರ್ಷಗಳ ಅಂಕಿಅಂಶಗಳ ಪರಿಶೀಲನೆ ತೋರಿಸುತ್ತದೆ, ಐಎಂಎಲ್ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ ನಿರಂತರವಾಗಿದೆ.
ಇದನ್ನು ಓದಿ : Tumakuru|ಸೋಪನಹಳ್ಳಿಯಲ್ಲಿ ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ

ಗಾಂಜಾ-ಅಫೀಮು ಹಾವಳಿಯೇ ಮುಖ್ಯ ಕಾರಣ?
ಈ ಕುಸಿತಕ್ಕೆ ಪ್ರಮುಖ ಕಾರಣವಾಗಿ ರಾಜ್ಯದಲ್ಲಿ ಹರಡುತ್ತಿರುವ ಗಾಂಜಾ, ಎಂಡಿಎಂಎ, ಅಫೀಮು ಮತ್ತು ಇತರ ಸಿಂಥೆಟಿಕ್ ಡ್ರಗ್ಸ್ ಬಳಕೆ. “ಯುವಕರು ಬಿಯರ್-ವಿಸ್ಕಿಗಿಂತ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ, ಇದರಿಂದ ಮದ್ಯ ಮಾರಾಟ ನೇರ ಪರಿಣಾಮವನ್ನು ಅನುಭವಿಸುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗಾಂಜಾ ಮಾರಾಟ ಹೆಚ್ಚು
ರಾಜ್ಯದಲ್ಲಿ ಗಾಂಜಾ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿ ಸೇರಿದಂತೆ ಎಲ್ಲಾ ನಗರಗಳಲ್ಲಿ ಲಭ್ಯವಾಗಿದೆ. ಒಂದು ಗ್ರಾಂ ಗಾಂಜಾ 300-500 ರೂ.ದಲ್ಲಿ ಲಭ್ಯವಿದ್ದು, ಇದು ಒಂದು ಬಾಟಲ್ ಬಿಯರ್ (150-200 ರೂ.)ಕ್ಕಿಂತ ಸ್ವಲ್ಪ ಹೆಚ್ಚು ದರದಿದ್ದರೂ ಯುವಕರು ಇದಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಆಧಾಯದ ಮೇಲೆ ಭಾರೀ ಹೊಡೆತ
ಈ ಕುಸಿತದಿಂದ ರಾಜ್ಯ ಸರ್ಕಾರದ ಆದಾಯಕ್ಕೂ ಹಾನಿ ಸಂಭವಿಸಿದೆ. 2024-25ನೇ ಸಾಲಿನಲ್ಲಿ ಮದ್ಯ ಮಾರಾಟದಿಂದ ₹38,000 ಕೋಟಿ ಆದಾಯ ಗುರಿಯಾಗಿತ್ತು, ಆದರೆ ಈ ಕುಸಿತದಿಂದ ಕನಿಷ್ಠ ₹2,500-3,000 ಕೋಟಿ ನಷ್ಟವಾಗುವ ಸಾಧ್ಯತೆ ಇದೆ. ಬಿಯರ್ ಮಾರಾಟ ಕುಸಿತವು ಅಬಕಾರಿ ಇಲಾಖೆಯ ಆದಾಯದಲ್ಲೂ ತೀವ್ರ ಇಳಿಕೆಯನ್ನು ತರುತ್ತಿದ್ದು, ಇದು ರಾಜ್ಯದ ಆರ್ಥಿಕತೆಗೆ ದೊಡ್ಡ ಆಘಾತವಾಗಲಿದೆ.

ಇದನ್ನು ನೋಡಿ : ಅಮಿತ್ ಶಾ ಭೇಟಿಯಾದ ರಾಜೇಂದ್ರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸ..!




