
BIGGBOSS KANNADA : ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಈ ವರ್ಷ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ. ಹೀಗಾಗಿ, ಈ ಬಾರಿ ದೊಡ್ಡ ಮನೆಗೆ ಯಾರೆಲ್ಲ ಪ್ರವೇಶಿಸುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದ್ದು, ಅದರಲ್ಲಿ ಖ್ಯಾತ ನಟ ವಿಜಯ್ ಸೂರ್ಯ, ‘ರಾಧಾ ರಮಣ’ ಧಾರಾವಾಹಿ ನಟಿ ಶ್ವೇತಾ ಪ್ರಸಾದ್, ಸತ್ಯ ಧಾರಾವಾಹಿ ನಟ ಸಾಗರ್ ಬಿಲ್ಲಿಗೌಡ, ಯೂಟ್ಯೂಬರ್ ಎಂ.ಡಿ. ಸಮೀರ್, ನಟಿ ದಿವ್ಯಾ ವಸಂತ್, ಮೇಘಾ ಶೆಟ್ಟಿ ಸೇರಿದಂತೆ ಹಲವು ಜನಪ್ರಿಯ ಹೆಸರುಗಳಿವೆ.
ಇದೇ ರೀತಿ, ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್, ಯೂಟ್ಯೂಬರ್ ಪಾಯಲ್ ಚೆಂಗಪ್ಪ, ನಟ ವರುಣ್ ಆರಾಧ್ಯಾ, ‘ಮಹಾನಟಿ’ ಚಿತ್ರ ಖ್ಯಾತಿಯ ಗಗನ ಭಾರಿ ಮತ್ತು ಗಾಯಕ ಸುನೀಲ್ ಮುಂತಾದವರ ಹೆಸರು ಕೂಡ ಈ ಪಟ್ಟಿಯಲ್ಲಿದೆ.




