
ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರದಲ್ಲಿ ವರುಣಾರ್ಭಟ ಹೆಚ್ಚಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಏರಿಯಾಗಳು ಮುಳುಗಡೆಯಾಗಿವೆ. ಅತ್ತ ರೈತ ಕಷ್ಟ ಬಿದ್ದು ಹೊಲದಲ್ಲಿ ಬೆಳೆದಿದ್ದ ಬೆಳೆಯಲ್ಲ ಹಾಳಾಗಿದ್ದು, ರೈತರ ಗೋಳು ಕೇಳೋರಿಲ್ಲ ಅನ್ನೋಆಗಿದೆ.
ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ತೋಟಗಳು ಸಂಪೂರ್ಣ ಜಲಾವೃತವಾಗಿವೆ .ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ದ್ರಾಕ್ಷಿ, ರಾಗಿ ಸೇರಿದಂತೆ ಹಲವು ಬೆಳೆ ತೋಟಗಳು ನೀರಿನಲ್ಲಿ ಮುಳುಗಿವೆ. ಹೊಲದಲ್ಲಿ ಬೆಳೆದಿದ್ದ ಬೆಳೆಗಳು ನೀರಿನಲ್ಲಿ ನೆಲ ಸಮವಾಗುತ್ತಿರುವುದನ್ನು ಕಂಡು ರೈತರು ಕಣ್ಣೀರು ಹಾಕುವಂತಾಗಿದೆ.ಇನ್ನೂ ರೈತರು ನಮಗೆ ಯಾವುದೇ ಅಧಿಕಾರಿಗಳ ಬೆಂಬಲವಿಲ್ಲ. ಡಿಸಿ ಇಲ್ಲ, ಎಸಿ ಇಲ್ಲ,ನಮ್ಮ ನೋವನ್ನು ಯಾರೂ ನೋಡಿಕೊಳ್ಳುವುದಿಲ್ಲ. ಇಷ್ಟು ದುಡಿದು ಬೆಳೆದಿದ್ದ ಬೆಳೆ ಹಾನಿಯಾದರೆ ,ನಾವು ಬದುಕೋದು ಹೇಗೆ ಎಂದು ಕಣ್ಣೀರಿಡುತ್ತಿದ್ದಾರೆ.ಇನ್ನು ಕೆರೆಗಳಿಗೆ ಹೋಗಬೇಕಾದ ನೀರು ಕಾಲುವೆಗಳು ಮುಚ್ಚಿಕೊಂಡಿರುವ ಕಾರಣ,ನೇರವಾಗಿ ಹೊಲ-ಗದ್ದೆಗಳಿಗೆ ನುಗ್ಗುತ್ತಿದೆ. ಇದರಿಂದ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಕೆರೆ ,ಕಾಲುವೆಗಳ ನಿರ್ವಹಣೆ ಸರಿಯಾಗಿ ಮಾಡದಿರುವುದೇ ಇಂದಿನ ದುರಂತಕ್ಕೆ ಕಾರಣ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಒಂದೆಡೆ ಮಳೆ,ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ. ಈ ಎರಡು ಹೊಡೆತಗಳು ರೈತನನ್ನು ಬೀದಿಗಿಳಿಯುವಂತೆ ಮಾಡಿವೆ. ತೋಟಗಳಿಗೆ ನುಗ್ಗಿದ ನೀರಿನಿಂದ ಮನೆಗಳೂ ಸಹ ಸುರಕ್ಷಿತವಾಗಿಲ್ಲ. ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ .ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗಪ್ಪ ಸೇರಿದಂತೆ ಅನೇಕ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಅತ್ತ ಅಧಿಕಾರಿಗಳು ಬಂದು ನಮ್ಮ ನೋವನ್ನು ನೋಡಲಿ, ಶಾಸಕರು ಒಂದು ಸಲ ನಮ್ಮ ಪರಿಸ್ಥಿತಿ ವಿಚಾರಿಸಲಿ. ಬೆಳೆ ಹಾನಿ ತುಂಬುವುದಕ್ಕೆ ಯಾರು ಮುಂದೆ ಬರ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಇದೇ ಸಮಯದಲ್ಲಿ ಸ್ಥಳೀಯರು ಕೂಡ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ .ರೈತನ ಬೆಂಬಲಕ್ಕೆ ಎಂದೂ ಅಧಿಕಾರಿಗಳು ಮುಂದೆ ಬರೋದಿಲ್ಲ ಎನ್ನುತ್ತಿದ್ದಾರೆ. ಚುನಾವಣೆಯ ಸಮಯಕ್ಕೆ ಮಾತ್ರ ನಮ್ಮ ಬಾಗಿಲು ತಟ್ಟುತ್ತಾರೆ. ಇಂದಿನಂತಾ ಕಷ್ಟದ ದಿನಗಳಲ್ಲಿ ಅಧಿಕಾರಿಗಳು ಗೈರು ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.




