Tumakuru : ಜಲ ಸಂರಕ್ಷಣೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಕಂಡಿರುವ ತುಮಕೂರು ಜಿಲ್ಲೆ ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರವಾಗಿದೆ.

Tumakuru : ಜಲ ಸಂರಕ್ಷಣೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಕಂಡಿರುವ ತುಮಕೂರು ಜಿಲ್ಲೆ ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರವಾಗಿದೆ. ಕೇಂದ್ರ ಜಲಶಕ್ತಿ ಇಲಾಖೆಯ ವತಿಯಿಂದ ನೀಡಲಾಗುವ ‘ಜಲ ಸಂಚಯನ್–ಜನ ಭಾಗೀದಾರಿ’ (JSJB) ರಾಷ್ಟ್ರೀಯ ಪ್ರಶಸ್ತಿಯನ್ನು ಮಾನ್ಯ ರಾಷ್ಟ್ರಪತಿಗಳು ಇಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರದಾನ ಮಾಡಿ ಸನ್ಮಾನಿಸಿದರು.
ಇದನ್ನು ಓದಿ : Weather Report : ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹಗುರ ಮಳೆ
2024–25ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ 9,885 ಜಲ ಸಂರಕ್ಷಣಾ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಜಲ ಸಂರಕ್ಷಣೆ ಮತ್ತು ಜನರ ನೇರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಕಾರ್ಯಗತಗೊಂಡ ಈ ಅಭಿಯಾನ ದೇಶದಾದ್ಯಂತ ಮಾದರಿಯಾಗಿದೆ.

ಈ ರಾಷ್ಟ್ರೀಯ ಗೌರವದೊಂದಿಗೆ 25 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಜಿಲ್ಲೆಗೆ ಮಂಜೂರು ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳು, ಗ್ರಾಮಸ್ಥರು ಮತ್ತು ವಿವಿಧ ಇಲಾಖೆಗಳ ಸಮನ್ವಯದಿಂದ ಜಲಸಂಪನ್ಮೂಲ ಸಂರಕ್ಷಣೆಯಲ್ಲಿ ಸಾಧಿಸಿದ ಉತ್ತೇಜನಕಾರಿ ಕಾರ್ಯಕ್ಕೆ ದೊರೆತಿರುವ ಈ ಪ್ರಶಸ್ತಿ ಜಿಲ್ಲೆಯೆಲ್ಲೆಡೆ ಸಂತೋಷ ವ್ಯಕ್ತವಾಗುತ್ತಿದೆ.
ತುಮಕೂರಿನ ಅನುಭವ ಮತ್ತು ಯಶಸ್ವಿ ಮಾದರಿಯನ್ನು ಇತರ ಜಿಲ್ಲೆಗಳಲ್ಲಿಯೂ ಜಾರಿಗೆ ತರಲು ಕೇಂದ್ರ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಇದನ್ನು ನೋಡಿ : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ – ಯಾವಾಗ ಗೃಹಲಕ್ಷ್ಮೀ ದುಡ್ಡು ಬರುತ್ತೆ ಗೊತ್ತಾ




