Gujarat : ಗುಜರಾತ್ನಲ್ಲಿ ಭೀಕರ ದುರಂತವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬ್ಯಲೆನ್ಸ್ಗೆ ಬೆಂಕಿ ಹತ್ತಿಕೊಂಡು ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ .

Gujrat : ಗುಜರಾತ್ನ ಅರವಲ್ಲಿ ಜಿಲ್ಲೆಯ ಮೋಡಸಾ ಪಟ್ಟಣದಲ್ಲಿ ಭೀಕರ ಆಂಬ್ಯುಲೆನ್ಸ್ ಅಗ್ನಿ ದುರಂತ ಸಂಭವಿಸಿದ್ದು, ನಾಲ್ವರು ಸಜೀವ ದಹನವಾಗಿದ್ದಾರೆ. ಇನ್ನು ಈ ಘಟನೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಡೆದಿದ್ದು, ಚಲಿಸುತ್ತಿದ್ದ ಆಂಬ್ಯುಲೆನ್ಸ್ಗೆ ಬೆಂಕಿ ಹತ್ತಿಕೊಂಡಿದೆ.
ಇದನ್ನು ಓದಿ : Viral News : ನಾಯಿಯನ್ನ ಮಗುವಿನಂತೆ ಹೆಗಲ ಮೇಲೆ ಹೊತ್ತು ನಡೆದ ವ್ಯಕ್ತಿ
ಆಂಬ್ಯುಲೆನ್ಸ್ ಚಾಲಕ ಪವಾಡದ ರೀತಿಯಲ್ಲಿ ಪಾರು
ಮೃತರ ಪೈಕಿ 1 ದಿನದ ನವಜಾತ ಶಿಶು, ಅವರ ತಂದೆ ಜಿಗ್ನೇಶ್ ಮೋಚಿ (38), ಅಹಮದಾಬಾದ್ನ ವೈದ್ಯ ಶಾಂತಿಲಾಲ್ ತೆನಿಟಾ (30), ಮತ್ತು ನರ್ಸ್ ಭುರಿಬೆನ್ ಮಾನತ್ (23) ಸೇರಿದ್ದಾರೆ. ಇನ್ನು ಆಂಬ್ಯುಲೆನ್ಸ್ ಚಾಲಕ ಪವಾಡದ ರೀತಿಯಲ್ಲಿ ಪಾರಾಗಿದ್ದಾರೆ. ಸುಟ್ಟ ಗಾಯಗಳೊಂದಿಗೆ ಮತ್ತಿಬ್ಬರು ಸಂಬಂಧಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಘಟನೆ
ನವಜಾತ ಶಿಶು ಜನಿಸಿದ ಕೂಡಲೇ ಮೋಡಸಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಿ ಕಂಡು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ನೋಡಿ : ಸಾಸಲು ಗೊಲ್ಲರಹಟ್ಟಿ-ಮಾಸ್ತಯ್ಯನಪಾಳ್ಯ ರಸ್ತೆಯಲ್ಲಿ ಭೀಕರ ಅಪಘಾತ, ವ್ಯಕ್ತಿಸಾವು




