BBK S12 : ಬಿಗ್ಬಾಸ್ ಮನೆಯಲ್ಲಿ ಪಿಸುಧ್ವನಿಯಲ್ಲಿ ಮಾತನಾಡುವುದು ಕಟ್ಟುನಿಟ್ಟಿನ ನಿಷೇಧ. ಇದು ಆಟದ ಮೂಲ ನಿಯಮಗಳಲ್ಲಿ ಪ್ರಮುಖವಾದದ್ದು.

BBK S12 : ಪಿಸುಧ್ವನಿಗೆ ನಿಷೇಧ – ಮೂಲ ನಿಯಮವನ್ನೇ ಮುರಿದ ಸ್ಪರ್ಧಿಗಳು
ಬಿಗ್ಬಾಸ್ ಮನೆಯಲ್ಲಿ ಪಿಸುಧ್ವನಿಯಲ್ಲಿ ಮಾತನಾಡುವುದು ಕಟ್ಟುನಿಟ್ಟಿನ ನಿಷೇಧ. ಇದು ಆಟದ ಮೂಲ ನಿಯಮಗಳಲ್ಲಿ ಪ್ರಮುಖವಾದದ್ದು. ಆದರೆ, ಜಾಹ್ನವಿ ಮತ್ತು ಅಶ್ವಿನಿ ಗೌಡ ಈ ನಿಯಮವನ್ನು ಪದೇಪದೇ ಉಲ್ಲಂಘಿಸುತ್ತಿದ್ದರು.
ಪದೇಪದೇ ನಿಯಮಗಳನ್ನು ಸುಮ್ಮನೆ ನಿರ್ಲಕ್ಷಿಸಿದ ಇವರ ವರ್ತನೆ ಬಿಗ್ಬಾಸ್ಗೆ ಕಿಡಿಕಾರುವಂತಾಗಿತ್ತು.ಕೊನೆಯಲ್ಲಿ ಬಿಗ್ಬಾಸ್ ನೇರ ನಾಮಿನೇಷನ್ ಮೂಲಕ ಕಠಿಣ ಶಿಕ್ಷೆ ವಿಧಿಸುವ ನಿರ್ಧಾರ ಕೈಗೊಂಡರು.
BBK S12 : ಸುದೀಪ್ ಎಚ್ಚರಿಕೆಗೂ ಸ್ಪರ್ಧಿಗಳ ಮಡ್ಡಿ ಪ್ರತಿಕ್ರಿಯೆ
ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ಡ್ರೆಸಿಂಗ್ ರೂಮ್ ಸೇರಿ ಮನೆಯಲ್ಲಿ ಯಾವೆಡೆಲೂ ಪಿಸುಧ್ವನಿಯಲ್ಲಿ ಮಾತನಾಡುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಸಿದ್ದರು.
ಆದರೆ ಜಾಹ್ನವಿ ಮತ್ತು ಅಶ್ವಿನಿ ಇದಕ್ಕೆ ಕಿಂಚಿತ್ತೂ ಮಹತ್ವ ನೀಡಲಿಲ್ಲ.
ಇದನ್ನು ಓದಿ : ಅತ್ತೆಯಿಂದ ಕಿರುಕುಳ ಆರೋಪ – ಮಗುವಿನೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮನೆಗೆ 50 ದಿನ ಕಳೆದರೂ ಕೆಲವು ಸ್ಪರ್ಧಿಗಳು ನಿಯಮ ಪಾಲನೆ ಮಾಡದೇ ಮುಂದುವರಿಯುತ್ತಿರುವುದನ್ನು ಬಿಗ್ಬಾಸ್ ಗಂಭೀರವಾಗಿ ನೋಡಿ ಕ್ರಮ ಕೈಗೊಂಡರು.
ಎಚ್ಚರಿಕೆ ಮೀರಿಯೂ ಪಿಸುಧ್ವನಿಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟವೆಂದು ಬಿಗ್ಬಾಸ್ ಹೇಳಿದ್ದಾರೆ.
ನಗುವಿನಲ್ಲೇ ತಪ್ಪು ಮುಚ್ಚಿದ ಜಾಹ್ನವಿ–ಅಶ್ವಿನಿ
ಬಿಗ್ಬಾಸ್ ಅವರ ತಪ್ಪಿನ ವಿಡಿಯೋ ಪ್ರದರ್ಶಿಸಿದರೂ,ಜಾಹ್ನವಿ ಮತ್ತು ಅಶ್ವಿನಿ ನಗುತ್ತಲೇ ಪ್ರತಿಕ್ರಿಯಿಸಿ, ತಪ್ಪು ಮಾಡಿದ ಪಾಶ್ಚಾತ್ತಾಪವೂ ತೋರಿಸಲಿಲ್ಲ.
ಈ ವರ್ತನೆ ನೋಡಿದ ಬಿಗ್ಬಾಸ್ ಇನ್ನಷ್ಟು ಅಸಮಾಧಾನಗೊಂಡು ನೇರ ನಾಮಿನೇಷನ್ ಘೋಷಿಸಿದರು.
ಬಿಗ್ಬಾಸ್ ಆಟದ ಕಠಿಣ ನಿಯಮಗಳು ಮುಂದುವರಿಯುತ್ತವೆ
ಬಿಗ್ಬಾಸ್ ಮನೆಯಲ್ಲಿ ನಿಯಮ ಉಲ್ಲಂಘನೆ ಮಾಡಿದರೆ ಶಿಕ್ಷೆ ಅನಿವಾರ್ಯ.ಸುದೀಪ್ ಕೂಡ ಆಗಾಗ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದರೂ,ಕೆಲವರು ನಿರಂತರವಾಗಿ ತಪ್ಪುಗಳನ್ನು ಪುನರಾವರ್ತಿಸುತ್ತಿರುವುದು ಪ್ರೇಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನು ನೋಡಿ : ಪಾವಗಡದಲ್ಲಿ ಹೆಚ್ಚಾಯ್ತು ಕಳ್ಳರ ಅಟ್ಟಹಾಸ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಎಸ್ಕೇಪ್




