Kitchen Recipe : ಕಡ್ಲೆಪುರಿ ಪೇಪರ್ ದೋಸೆ: ನಿಮಿಷಗಳಲ್ಲಿ ತಯಾರಿಸಬಹುದಾದ ಕ್ರಿಸ್ಪಿ ಬ್ರೇಕ್ಫಾಸ್ಟ್ ರೆಸಿಪಿ ,ಕಡ್ಲೆಪುರಿ ಪೇಪರ್ ದೋಸೆ ವಿಶೇಷತೆ

Kitchen Recipe : ಕ್ರಿಸ್ಪಿ ಹಾಗೂ ರುಚಿಕರವಾದ ಕಡ್ಲೆಪುರಿ ಪೇಪರ್ ದೋಸೆ ಮನೆಯಲ್ಲೇ ಕೇವಲ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು. ಹಿಟ್ಟಿನ ಫರ್ಮೆಂಟೇಶನ್ ಅಗತ್ಯವಿಲ್ಲದೇ ತಕ್ಷಣ ತಯಾರಿಸಬಹುದಾದ ಈ ರೆಸಿಪಿ ಬ್ರೇಕ್ಫಾಸ್ಟ್ಗೆ ಪರ್ಫೆಕ್ಟ್!
ಬೇಕಾಗುವ ಪದಾರ್ಥಗಳು (Ingredients)
- ಕಡ್ಲೆಪುರಿ ಪುರಿ (ಟೊಳ್ಳುಪುರಿ / ಬೆಂಗಳೂರು ಪುರಿ) – 2 ಬಟ್ಟಲು
- ಚಿರೋಟಿ ರವೆ – ಅರ್ಧ ಬಟ್ಟಲು
- ಮೊಸರು – ಅರ್ಧ ಬಟ್ಟಲು
- ಕಡಲೆ ಹಿಟ್ಟು – 2 ಚಮಚ
- ಗೋಧಿ ಹಿಟ್ಟು – 2 ಚಮಚ
- ಬೆಣ್ಣೆ – ಸ್ವಲ್ಪ
- ಎಣ್ಣೆ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಸಕ್ಕರೆ – ಅರ್ಧ ಚಮಚ
ಇದನ್ನು ನೋಡಿ : Bengaluru: ಡೇಟಿಂಗ್ ಆ್ಯಪ್ನಲ್ಲಿ ಗಾಳ; ಸುಂದರಿ ಸ್ನೇಹ ಮಾಡಿ ₹1.29 ಕೋಟಿ ಕಳೆದುಕೊಂಡ ಅಮಾಯಕ
ಮಾಡುವ ವಿಧಾನ (Preparation Method)
ಹಂತ 1: ಹಿಟ್ಟಿನ ತಯಾರಿ
ಮೊದಲಿಗೆ ಕಡ್ಲೆಪುರಿಯನ್ನು ನೀರಿನಲ್ಲಿ ತೊಳೆದು, ಸುಮಾರು 10 ನಿಮಿಷ ನೆನೆಯಲು ಬಿಡಿ.
ಚಿರೋಟಿ ರವೆಯನ್ನೂ ಒಂದು ಬಟ್ಟಲು ನೀರಿನಲ್ಲಿ ನೆನೆಸಿರಿ.
ನಂತರ ಎರಡನ್ನೂ ನೀರು ಬಸಿದು, ಮಿಕ್ಸಿ ಜಾರ್ಗೆ ಹಾಕಿ.
ಇದಕ್ಕೆ ಮೊಸರು, ಕಡಲೆಹಿಟ್ಟು, ಗೋಧಿ ಹಿಟ್ಟು ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಸುಮಾರು 15-20 ನಿಮಿಷ ನೆನೆಯಲು ಬಿಡಿ.
ಹಂತ 2: ದೋಸೆ ಬೇಯಿಸುವುದು
ಒಲೆಯ ಮೇಲೆ ದೋಸೆ ಕಾವಲಿ ಬಿಸಿ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಟಿಶ್ಯೂ ಪೇಪರ್ನಿಂದ ಒರೆಸಿ.
ನಂತರ ಹಿಟ್ಟನ್ನು ತೆಳ್ಳಗೆ ಹೊಯ್ದು ಅದರ ಮೇಲೆ ಸ್ವಲ್ಪ ಬೆಣ್ಣೆ ಮತ್ತು ಎಣ್ಣೆ ಚಿಮುಕಿಸಿ.
ಮುಚ್ಚಳ ಮುಚ್ಚಿ, ಕೆಂಪಗೆ ಕ್ರಿಸ್ಪಿಯಾಗಿ ಬೇಯಿಸಿದರೆ ರುಚಿಕರವಾದ ಕಡ್ಲೆಪುರಿ ಪೇಪರ್ ದೋಸೆ ಸಿದ್ಧ!
ಸರ್ವ್ ಮಾಡುವ ಸಲಹೆ
ಈ ಕ್ರಿಸ್ಪಿ ದೋಸೆಯನ್ನು ಕೊಬ್ಬರಿ ಚಟ್ನಿ, ಅಲೂಗಡ್ಡೆ ಪಲ್ಯ, ಅಥವಾ ಸಾಂಬಾರ್ ಜೊತೆಗೆ ಸವಿಯಿರಿ.
ಇದನ್ನು ಓದಿ : Health Tips : ಸೀಬೆ ಎಲೆಗಳ ಟೀ ಕುಡಿಯುವುದರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ..!




