Chikkaballapura: ಅಮೆರಿಕದ ವಾಯುಸೇನೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ (B-1B Lancer Bomber) ಯುದ್ಧ ವಿಮಾನದ ಹಾರಾಟ ನಡೆಸುತ್ತಿರುವುದನ್ನು ಕಂಡು ಚಿಕ್ಕಬಳ್ಳಾಪುರದ ಜನತೆ ಬೆಚ್ಚಿಬಿದ್ದಿದ್ದಾರೆ.

Chikkaballapura: ಅಮೆರಿಕದ ವಾಯುಸೇನೆಯ ಸೂಪರ್ಸಾನಿಕ್ ಯುದ್ಧ ವಿಮಾನ B-1B ಲ್ಯಾನ್ಸರ್ ಬಾಂಬರ್ ಚಿಕ್ಕಬಳ್ಳಾಪುರ ಜಿಲ್ಲೆಯ ಆಕಾಶದಲ್ಲಿ ಹಾರಾಡಿದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದ ಘಟನೆ ಇಂದು ನಡೆದಿದೆ.
ಚಿಕ್ಕಬಳ್ಳಾಪುರದ ಆಕಾಶದಲ್ಲಿ ಅಮೆರಿಕದ B-1B ಲ್ಯಾನ್ಸರ್ ಬಾಂಬರ್ ಹಾರಾಟ
ಚಿಕ್ಕಬಳ್ಳಾಪುರ ತಾಲೂಕಿನ ಆರೂರ್, ಆವಲನಾಗೇನಹಳ್ಳಿ, ಚಿಕ್ಕಪೈಲಗುರ್ಕಿ, ತುಮಕಲಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ಮೇಲೆ ಈ ಯುದ್ಧವಿಮಾನ ಹಾರಾಟ ನಡೆಸಿದಾಗ, ಭಾರೀ ಶಬ್ದ ಕೇಳಿ ಜನ ಆತಂಕಗೊಂಡರು.
ಹೆಲಿಕಾಪ್ಟರ್ ಪತನ ವದಂತಿ ಸಂಚಲನ!
ವಿಮಾನದ ಘರ್ಜನೆ ಕೇಳಿ ಕೆಲವರು “ಹೆಲಿಕಾಪ್ಟರ್ ಪತನವಾಗಿದೆ” ಎಂದು ಭಾವಿಸಿ ಹಳ್ಳಿಗಳಲ್ಲಿ ವದಂತಿ ಹಬ್ಬಿಸಿದ್ದಾರೆ. ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಪೇರೇಸಂದ್ರ ಪೊಲೀಸರು ಸಹ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : TEJAS MK-1A Fighter Jet: ಹಾರಾಟಕ್ಕೆ Ready ಆದ India ಸ್ವದೇಶಿ ನಿರ್ಮಿತ Fighter ಜೆಟ್!

ಆಕಾಶದಲ್ಲಿ ಬಾಂಬರ್ ಸದ್ದು! ಚಿಕ್ಕಬಳ್ಳಾಪುರದಲ್ಲಿ ಜನತೆ ಆತಂಕ
ಹಲವಾರು ಪ್ರದೇಶಗಳಲ್ಲಿ ಪೊಲೀಸರು ಬೆಟ್ಟ-ಗುಡ್ಡಗಳ ಕಡೆ ಹುಡುಕಾಟ ನಡೆಸಿ, ಯಾವುದೇ ವಿಮಾನ ಪತನವಾಗಿದೆಯೇ ಎಂದು ಪರಿಶೀಲಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಿ–1ಬಿ ಲ್ಯಾಂಡ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ನಿಂದ ಬಂದ ಮಾಹಿತಿಯ ಪ್ರಕಾರ, ಅದು ಅಮೆರಿಕದ B-1B ಲ್ಯಾನ್ಸರ್ ಬಾಂಬರ್ ವಿಮಾನವಾಗಿದ್ದು, ಈಗಾಗಲೇ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಭಾರತ–ಅಮೆರಿಕ ಜಂಟಿ ಸಮರಾಭ್ಯಾಸದ ಭಾಗವಾಗಿ B-1B ಲ್ಯಾನ್ಸರ್ ಬಾಂಬರ್
ಈ ವಿಮಾನ ಭಾರತ–ಅಮೆರಿಕ ಜಂಟಿ ಸಮರಾಭ್ಯಾಸ (India–US Joint Air Exercise)ದ ಭಾಗವಾಗಿ ಭಾರತಕ್ಕೆ ಆಗಮಿಸಿದೆ. ನವೆಂಬರ್ 10ರಿಂದ 13ರವರೆಗೆ ನಡೆಯುತ್ತಿರುವ ಈ ಅಭ್ಯಾಸದ ಉದ್ದೇಶ.
ಅಮೆರಿಕದ ಸೂಪರ್ಸಾನಿಕ್ ಯುದ್ಧವಿಮಾನ
ಎರಡೂ ದೇಶಗಳ ವಾಯುಪಡೆಗಳ ನಡುವಿನ ಸಮನ್ವಯತೆ, ಸಂಯುಕ್ತ ಕಾರ್ಯಾಚರಣೆ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸುವುದು. B-1B ಲ್ಯಾನ್ಸರ್ ಬಾಂಬರ್ ಅಮೆರಿಕದ ವಾಯುಪಡೆಯ ದೀರ್ಘ ಶ್ರೇಣಿಯ, ಬಹು-ಮಿಷನ್, ಸೂಪರ್ಸಾನಿಕ್ ಯುದ್ಧವಿಮಾನ ಆಗಿದ್ದು, 1985ರಿಂದ ಸೇವೆಯಲ್ಲಿ ಇದೆ.
ಅಮೆರಿಕದ B-1B ಲ್ಯಾನ್ಸರ್ ಬಾಂಬರ್
ಇದನ್ನು “ದಿ ಬೋನ್” (The Bone) ಎಂದೂ ಕರೆಯಲಾಗುತ್ತದೆ. ಅಂದರೆ “ವಾಯುಪಡೆಯ ಬೆನ್ನೆಲುಬು” ಎಂಬ ಅರ್ಥ. ಸಾಂಪ್ರದಾಯಿಕ ಬಾಂಬ್ ದಾಳಿಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮುಂದಿನ ಅಭಿವೃದ್ಧಿತ ಮಾದರಿಯೇ ಪ್ರಸಿದ್ಧ B-2 ಸ್ಟೆಲ್ತ್ ಬಾಂಬರ್.
MUST WATCH : AIRPLANE CRASH | ಟೇಕ್ ಆಫ್ ವೇಳೆವಿಮಾನ ಪತನ 133ಕ್ಕೂ ಹೆಚ್ಚು ಪ್ರಯಾಣಿಕರ ಸಾ*




