
RASHMIKA MANDANNA : ದಕ್ಷಿಣ ಭಾರತದ ನಟಿ ನ್ಯಾಷನಲ್ ಕ್ರಶ್ ಎಂದೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ರಾಷ್ಟ್ರಮಟ್ಟದ ಖ್ಯಾತಿ ಗಳಿಸಿ, ಬಾಲಿವುಡ್ನಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಸದ್ಯ ಮಂದಣ್ಣ ಬಾಲಿವುಡ್ ಸೂಪರ್ ಹೀರೋ ಫ್ರಾಂಚೈಸಿಯಾದ ‘ಕ್ರಿಶ್ 4’ನಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
‘ಕ್ರಿಶ್’ ಹಾಗೂ ‘ಕ್ರಿಶ್ 3’ ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಪ್ರಸ್ತುತ ಅವರು ಹಾಲಿವುಡ್ಗೆ ಸ್ಥಳಾಂತರಗೊಂಡಿರುವುದರಿಂದ, ಹಿಂದಿ ಚಿತ್ರರಂಗಕ್ಕೆ ತಾತ್ಕಾಲಿಕವಾಗಿ ದೂರವಿದ್ದಾರಂತೆ. ಈ ಹಿನ್ನೆಲೆಯಲ್ಲಿ, ‘ಕ್ರಿಶ್ 4’ ಚಿತ್ರತಂಡ ಹೊಸ ನಾಯಕಿಯನ್ನು ಹುಡುಕುತ್ತಿದ್ದು, ರಶ್ಮಿಕಾ ಮಂದಣ್ಣ ಅವರ ಹೆಸರು ಮುಂದೆ ಬರುತ್ತಿದೆ.
ಚಿತ್ರದ ಸ್ಕ್ರಿಪ್ಟ್ ಕೆಲಸ ಈಗಾಗಲೇ ಪ್ರಗತಿಯಲ್ಲಿದ್ದು, ಪಾತ್ರಗಳ ಆಯ್ಕೆಯು ಕೂಡ ಅಂತಿಮ ಹಂತದಲ್ಲಿದೆ. ಹೃತಿಕ್ ರೋಷನ್ ಈ ಚಿತ್ರದಲ್ಲಿ ಹೀರೋ ಆಗಿದ್ದು, ಈ ಬಾರಿ ಅವರು ರಶ್ಮಿಕಾ ಜೊತೆ ಜತೆಯಾಗಲಿದ್ದಾರೆ ಎನ್ನುವುದು ಚಿತ್ರರಸಿಕರಲ್ಲಿ ಉತ್ಸಾಹ ಉಂಟುಮಾಡಿದೆ. ಚಿತ್ರದ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ, ಆದರೆ ಈ ಜೋಡಿ ಮೇಲೆ ಈಗಾಗಲೇ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.





