
Cricketer Arshdeep Singh : ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ಓಮಾನ್ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಮೊಟ್ಟಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಸಿಂಗ್ ಪಾತ್ರರಾಗಿದ್ದಾರೆ. ಶುಕ್ರವಾರ ಒಮಾನ್ ವಿರುದ್ಧದ ಪಂದ್ಯ ದಲ್ಲಿ ವಿನಾಯಕ್ ಶುಕ್ಲಾ ಅವರ ವಿಕೆಟ್ ಕಬಳಿಸುವ ಮೂಲಕ ಈ ದಾಖಲೆ ಸೃಷ್ಟಿಸಿದರು.
ಈ ಸಾಧನೆಯ ಮೂಲಕ ಯಜುವೇಂದ್ರ ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ (ತಲಾ 96 ವಿಕೆಟ್) ಅವರನ್ನು ಅರ್ಷದೀಪ್ ಹಿಂದಿಕ್ಕಿದ್ದಾರೆ. ಕೇವಲ 64 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಟಿ20 ಕ್ರಿಕೆಟ್ ಇತಿಹಾ ಸದಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವೇಗದ ಬೌಲರ್ ಎಂಬ ಹೆಗ್ಗಳಿಕೆಯಲ್ಲೂ ಅರ್ಷದೀಪ್ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಪಾಕಿಸ್ತಾನ ವಿರುದ್ಧ ಕಠಿಣ ಪಂದ್ಯ ಎದುರಿಸಬೇಕಿರುವ ಭಾರತ, ಓಮಾನ್ ವಿರುದ್ಧ ಹಲವಾರು ಪ್ರಯೋಗಗಳನ್ನು ನಡೆಸಿತು. ನಾಯಕ ಸೂರ್ಯಕುಮಾರ್ ಯಾದವ್ ಕ್ರೀಸ್ ಗೆ 11ನೇ ಆಟಗಾರನಾಗಿ ಇಳಿದು, ಎಲ್ಲ ಆಟಗಾರರಿಗೂ ಅವಕಾಶ ನೀಡಿದರು. ಮೊದಲ ಬಾರಿಗೆ ಟಿ20 ವಿಶ್ವಚಾಂಪಿಯನ್ ನಲ್ಲಿ ಆಡಿದ ಒಮಾನ್ ಗೆ 189 ರನ್ ಗಳ ಗುರಿ ನಿಗದಿಪಡಿಸಿದ ಭಾರತ ಅಂತಿಮವಾಗಿ 21 ರನ್ ಗಳ ರೋಚಕ ಜಯ ಸಾಧಿಸಿತು.

