
BENGALURU : ಸಚಿವ ಸತೀಶ್ ಜಾರಕಿಹೊಳಿ ಜರ್ಮನಿಯ ಪ್ರಸಿದ್ಧ ‘ಅಗಸ್ಟಾ’ ಕಂಪನಿಯಿಂದ ಅತ್ಯಾಧು ನಿಕ ಡಬಲ್ ಎಂಜಿನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಪಕ್ಷದ ಸಂಘಟನೆ ಹಾಗೂ 2028ರ ವಿಧಾನಸಭೆ ಚುನಾ ವಣೆಗೆ ಸಜ್ಜಾಗುತ್ತಿರುವ ಹಿನ್ನಲೆಯಲ್ಲಿ ಈ ಹೆಲಿಕಾಪ್ಟರ್ ಖರೀದಿ ನಡೆದಿದೆ.
ಈ ಹೆಲಿಕಾಪ್ಟರ್ನಲ್ಲಿ ಐವರು ಪ್ರಯಾಣಿಕರು ಹಾಗೂ ಇಬ್ಬರು ಇಬ್ಬರು ಪೈಲಟ್ಗಳು ಪ್ರಯಾಣಿಸಲು ಚಾಪರ್ ಸೀಟ್ ಸೌಲಭ್ಯವನ್ನು ಹೊಂದಿದೆ. ಜೊತೆಗೆ ಸುಧಾರಿತ ಸುರಕ್ಷಾ ವ್ಯವಸ್ಥೆ, ನವೀನ ವೈರ್ಲೆಸ್ ಸಂವಹನ ತಂತ್ರಜ್ಞಾನ ಮತ್ತು ವೇಗದ ಪ್ರಯಾಣಕ್ಕೆ ಅನುಕೂಲವಾಗುವ ವಿಶೇಷ ತಂತ್ರಜ್ಞಾನವಿದೆ.
ಹಳೆಯ ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಮಾರಾಟ ಮಾಡಿ, ಈ ಹೊಸ ಹೆಲಿಕಾಪ್ಟರ್ ಖರೀದಿಸಿರುವ ಜಾರಕಿ ಹೊಳಿ, ಉತ್ತರ ಕರ್ನಾಟಕದ ಭಾಗದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಯಾಗಿದ್ದರು. ಈಗ ಆಧುನಿಕ ಚಾಪರ್ ಖರೀದಿಸಿ ತಮ್ಮ ರಾಜಕೀಯ ಕೌಶಲ್ಯವನ್ನೂ, ಆರ್ಥಿಕ ಸಾಮರ್ಥ್ಯ ವನ್ನೂ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಾಹುಕಾರ್ ಸತೀಶ್ ಜಾರಕಿಹೊಳಿ ಅವರು ಈಗ ಆಧುನಿಕ ಹೆಲಿಕಾಪ್ಟರ್ ಖರೀದಿಸಿ ಎಲ್ಲರ ಹುಬ್ಬೇರಿಸು ವಂತೆ ಮಾಡಿದ್ದಾರೆ.




