Cinema News: ನಟಿ ಪ್ರಿಯಾಂಕಾ ಉಪೇಂದ್ರ ನಟಿಸಿರುವ ಹೊಸ ಚಿತ್ರ `ಸಪ್ಟೆಂಬರ್ 21’ ಚಿತ್ರ (September 21 Movie) ತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

Cinema News: ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ ಹೊಸ ಸಿನಿಮಾ ‘ಸೆಪ್ಟೆಂಬರ್ 21’ (September 21) ಬಿಡುಗಡೆಗೆ ಸಿದ್ಧವಾಗಿದೆ.
ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಸೆಪ್ಟೆಂಬರ್ 21’ ಚಿತ್ರ 2026ಕ್ಕೆ ಬಿಡುಗಡೆ
ಚಿತ್ರದ ಪೋಸ್ಟ್–ಪ್ರೊಡಕ್ಷನ್ ಕಾರ್ಯ ಪೂರ್ಣಗೊಂಡಿದ್ದು, ಚಿತ್ರತಂಡವು 2026ರಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದೆ. ಈ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ.
ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ‘ಸೆಪ್ಟೆಂಬರ್ 21’
21 ವರ್ಷದ ಯುವ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿದೆ. ಇದೇ ನವೆಂಬರ್ 20 ರಿಂದ 24 ರವರೆಗೆ ನಡೆಯಲಿರುವ 56ನೇ ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (IFFI Goa 2025) ಪ್ರದರ್ಶನಗೊಳ್ಳಲಿದೆ.

ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟರು
ಪ್ರಿಯಾಂಕಾ ಉಪೇಂದ್ರ ಜೊತೆಗೆ ಪ್ರವೀಣ್ ಸಿಂಗ್ ಸಿಸೋಡಿಯಾ, ಝರಿನ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ ಮತ್ತು ಸಚಿನ್ ಪಾಟೆಕರ್ ಸೇರಿದಂತೆ ಅನೇಕ ಬಾಲಿವುಡ್ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Cinema News: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್..!
ಆಲ್ಝೈಮರ್ ಹಿನ್ನೆಲೆಯ ಸಿನಿಮಾ
ಈ ಸಿನಿಮಾ ಆಲ್ಝೈಮರ್ ಕಾಯಿಲೆ (Alzheimer’s Disease) ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ರೋಗಿಗಿಂತ ಅವನ ಪಾಲನೆ ಮಾಡುವವರ ನಿರ್ಧಾರಗಳು ಎಷ್ಟು ಮುಖ್ಯ ಎಂಬ ಅಂಶವನ್ನು ಕೇಂದ್ರಬಿಂದುವಾಗಿಟ್ಟುಕೊಂಡಿದೆ.
ಬಾಲಿವುಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಚಿತ್ರ ನಿರ್ದೇಶನ
ಚಿತ್ರದ ಕಥೆ ರಾಜಶೇಖರ್, ಸಂಗೀತ ವಿನಯ್ ಚಂದ್ರ, ಹಾಗೂ ಛಾಯಾಗ್ರಹಣ ಅನಿಲ್ ಕುಮಾರ್ ಅವರದ್ದು. ಈ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಆಲಿ ಅವರ ಪತ್ನಿ ಪ್ರೀತಿ ಆಲಿ ಅವರ ಹಮಾರಾ ಮೂವಿ ಸಂಸ್ಥೆಯ ಸಹಭಾಗಿತ್ವದಲ್ಲಿ FMD Visic Films ಮತ್ತು Film Max Production ನಿರ್ಮಿಸುತ್ತಿವೆ.
ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ
ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಮೊದಲ ಪೋಸ್ಟರ್ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಮಧ್ಯಮ ವರ್ಗದ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
MUST WATCH: KANTARA SHOW CANCELLED | S MALL ನಲ್ಲಿ ಫುಲ್ ಫೈಟ್




