BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಅಶ್ವಿನಿ ಗೌಡ ಸದ್ಯ ಸಾಕಷ್ಟು ಚರ್ಚೆಯಲ್ಲಿರುವ ಹೆಸರುಗಳಲ್ಲಿ ಒಂದು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿ ಅಶ್ವಿನಿ ಗೌಡ ಸದ್ಯ ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಅವರು ದೊಡ್ಮನೆಯಲ್ಲಿ ಕೂಗಾಡಿಕೊಂಡು ಸಾಕಷ್ಟು ಚರ್ಚೆಗೆ ಕಾರಣ ಆಗಿದ್ದರು.
ರಕ್ಷಿತಾ ಶೆಟ್ಟಿ ಹೇಳಿದ ಮಾತನ್ನು ತಿರುಚಿದ ವಿಚಾರದಲ್ಲೂ ಅಶ್ವಿನಿ ಅವರು ಸುದೀಪ್ ಕಡೆಯಿಂದ ಪಾಠ ಹೇಳಿಸಿಕೊಳ್ಳಬೇಕಾಯಿತು. ಹೀಗಿರುವಾಗಲೇ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಬಿಟ್ಟಿದ್ದಾರೆ.
ನವೆಂಬರ್ 10 ಎಪಿಸೋಡ್ ಉದಾಹರಣೆ
ನವೆಂಬರ್ 10 ರ ಎಪಿಸೋಡ್ನಲ್ಲಿ, ಸ್ಪರ್ಧಿಗಳಿಗೆ ಯಾರ ಗುಣದಿಂದ ಉಳಿದವರಿಗೆ ನೋವಾಗುತ್ತಿದೆ ಎಂದು ಹಸಿ ಮೆಣಸು ನೀಡಿ ಹೇಳುವ ಟಾಸ್ಕ್ ನೀಡಲಾಯಿತು. ಈ ಸಂದರ್ಭದಲ್ಲಿ ಅನೇಕ ಸ್ಪರ್ಧಿಗಳು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು.
ಮೊದಲಿಗೆ ಹೆಸರು ತೆಗೆದುಕೊಳ್ಳುತ್ತಿದ್ದಂತೆ ಅವರು ಸಿಟ್ಟಾಗುತ್ತಿದ್ದರೂ, ಈಗ ಬಹುತೇಕ ಸಂದರ್ಭಗಳಲ್ಲಿ ಮೌನವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ. ಏನೇ ಹೇಳಿದರೂ ನಗುತ್ತಾ ಸ್ವೀಕರಿಸುವುದು ಅವರ ಹೊಸ ಶೈಲಿ ಎಂದು ವೀಕ್ಷಕರು ಗಮನಿಸಿದ್ದಾರೆ.
ಇದನ್ನು ಓದಿ : ಬೆಂಗಳೂರಿನಲ್ಲಿ ನಮ್ಮ Metro Pink Line ಮಾರ್ಗ ಉದ್ಘಾಟನೆ 2026ಕ್ಕೆ ಮುಂದೂಡಿಕೆ
ಗಿಲ್ಲಿಯ ಗಮನಕ್ಕೆ ಬಂದ ಸೈಲೆಂಟ್ ಶೈಲಿ
ಸೋಮವಾರದ ಚಟುವಟಿಕೆ ವೇಳೆ, ಗಿಲ್ಲಿ ಅವರು “ಅಶ್ವಿನಿ ಗೌಡ ಸೈಲೆಂಟ್ ಆಗಿದ್ದಾರೆ. ಯಾವುದಕ್ಕೂ ಏನನ್ನೂ ಹೇಳುತ್ತಿಲ್ಲ. ಹೀಗಾಗಿಯೇ ಅನೇಕರು ಅಶ್ವಿನಿ ಹೆಸರು ತೆಗೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ಧಾರೆ. ಈ ಮಾತು, ಅಶ್ವಿನಿ ಅವರ ಸೈಲೆಂಟ್ ಶೈಲಿ ವೀಕ್ಷಕರಿಗೆ ಮಾತ್ರವಲ್ಲ, ಸ್ಪರ್ಧಿಗಳಿಗೆ ಮತ್ತು ಗಿಲ್ಲಿಗೂ ಗಮನಸೆಳೆದಿರುವುದಕ್ಕೆ ಸಾಕ್ಷಿಯಾಗಿದೆ.
ಶಾಂತಿಯ ಹಿಂದೆ ಇರುವ ಕಾರಣ
ಕಳೆದ ವಾರ, ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದ ಹಿನ್ನೆಲೆ, ಒಂದಿಡೀ ಎಪಿಸೋಡ್ ಅಶ್ವಿನಿಯ ಮೇಲೆ ಬಹುಮುಖ್ಯವಾಗಿತ್ತು. ಈ ತಪ್ಪು ಮತ್ತೆ ಆಗಬಾರದು ಎಂಬ ಕಾರಣದಿಂದ ಅವರು ಈಗ ಚರ್ಚೆಗಳಿಗೆ ಪ್ರತಿಕ್ರಿಯಿಸದೆ ಶಾಂತವಾಗಿ ಇರುವ ಶೈಲಿಯನ್ನು ತಾಳುತ್ತಿರುವಂತೆ ಕಾಣಿಸುತ್ತಿದ್ದಾರೆ.
ಅಶ್ವಿನಿ ಗೌಡ ಫುಲ್ ಸೈಲೆಂಟ್
ಅಶ್ವಿನಿ ಗೌಡ ಅವರು ಕಳೆದ ವಾರ ಸುದೀಪ್ ಅವರಿಂದ ಸರಿಯಾಗಿ ಪಾಠ ಹೇಳಿಸಿಕೊಂಡಿದ್ದರು. ಒಂದಿಡೀ ಎಪಿಸೋಡ್ ಬಹುತೇಕ ಅವರ ಮೇಲೆ ಸಾಗಿತ್ತು ಎಂದರೂ ತಪ್ಪಾಗಲಾರದು. ಈ ತಪ್ಪು ಮತ್ತೆ ಆಗಬಾರದು ಎಂಬ ಕಾರಣಕ್ಕೆ ಅವರು ಸೈಲೆಂಟ್ ಆದರೇ ಎಂಬ ಪ್ರಶ್ನೆ ಮೂಡಿದೆ.
ಇದನ್ನು ನೋಡಿ : Priyank Kharge: ಅಮಿತ್ ಶಾ ಅಸಮರ್ಥ ಗೃಹ ಸಚಿವ, ಸಚಿವ ಪ್ರಿಯಾಂಕ್ ಖರ್ಗೆ ಕಿಡಿ!




