Hair Care Tips : ಕೂದಲು ಮನುಷ್ಯನ ಅಂದ ಚೆಂದವನ್ನು ಹೆಚ್ಚಿಸುತ್ತದೆ. ಸೊಂಪಾದ, ದಪ್ಪ ಕಪ್ಪು ಕೂದಲು ಹೊಂದಿರಬೇಕೆಂದು ಎಲ್ಲರೂ ಬಯಸುತ್ತಾರೆ.

ಕೂದಲು ಮನುಷ್ಯನ ಅಂದ ಚೆಂದವನ್ನು ಹೆಚ್ಚಿಸುತ್ತದೆ. ಸೊಂಪಾದ, ದಪ್ಪ ಕಪ್ಪು ಕೂದಲು ತಮ್ಮದಾಗಬೇಕೆಂಬುದು ಎಲ್ಲರ ಕನಸು. ಆದರೆ ಇತ್ತೀಚಿನ ದಿನಗಳಲ್ಲಿ ಯೌವ್ವನದಲ್ಲಿಯೇ ಅನೇಕರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಯೌವ್ವನದಲ್ಲೇ ಕೂದಲು ಉದುರುವಿಕೆ
ತಲೆ ಹಾಗೂ ನೆತ್ತಿಯ ಭಾಗದಲ್ಲಿ ಕೂದಲು ತೆಳುವಾಗುವುದು, ಬೋಳು ತಲೆಯಾದಂತೆ ಕಾಣುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ಸಾವಿರಾರು ರೂಪಾಯಿ ಖರ್ಚುಮಾಡಿ ಎಣ್ಣೆ, ಕ್ರೀಮ್ಗಳನ್ನು ಬಳಸದರೂ ಪರಿಣಾಮಕಾರಿಯಾದ ಪರಿಹಾರ ಸಿಗುವುದಿಲ್ಲ.
ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ಬೇಕು
ಹೆಚ್ಚಿನವರು ವಿಗ್ ಅಥವಾ ಕೃತಕ ಕೂದಲಿನ ಚಿಕಿತ್ಸೆಗೆ ಮೊರೆ ಹೋಗುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಕೂದಲು ಉದುರುವ ಮೂಲ ಕಾರಣವನ್ನು ಅರಿತು, ಒಳಗಿನ ಪೋಷಕಾಂಶ ಕೊರತೆಯನ್ನು ನಿವಾರಿಸುವುದು ಶಾಶ್ವತ ಪರಿಹಾರದ ಮಾರ್ಗ.
ಕೂದಲು ಉದುರುವಿಕೆಯ ಪ್ರಮುಖ ಕಾರಣಗಳು
ಹಾರ್ಮೋನ್ ಅಸಮತೋಲನ, ಪೋಷಕಾಂಶ ಕೊರತೆ, ಒತ್ತಡ, ಥೈರಾಯ್ಡ್ ಸಮಸ್ಯೆ, ಪ್ರಸವಾನಂತರದ ಬದಲಾವಣೆ, ಹಾಗೂ ಆನುವಂಶಿಕ ಅಂಶಗಳು ಸೇರಿವೆ. ಆದ್ದರಿಂದ ಕೂದಲು ದಟ್ಟವಾಗಿ ಬೆಳೆಯಲು ಮೊದಲೇ ಆಹಾರದ ಕಡೆ ಗಮನ ಹರಿಸಬೇಕು.
ಇದನ್ನು ಓದಿ : Actor Abhinay : ಕಾಲಿವುಡ್ ಜನಪ್ರಿಯ ನಟ ಅಭಿನಯ್ ಇನ್ನಿಲ್ಲ
ಕೂದಲು ಬೆಳೆಯಲು ಸಹಾಯಕ ಆಹಾರಗಳು
ಒಣ ಹಣ್ಣುಗಳು
ಅಂಜೂರ, ಖರ್ಜೂರ ಮತ್ತು ಒಣದ್ರಾಕ್ಷಿ — ಈ ಮೂರು ಹಣ್ಣುಗಳಲ್ಲಿ ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.
ಬೆಳಿಗ್ಗೆ ಉಪಾಹಾರದೊಂದಿಗೆ 2 ನೆನೆಸಿದ ಖರ್ಜೂರ, 2 ಅಂಜೂರ ಮತ್ತು 1 ಚಮಚ ಒಣದ್ರಾಕ್ಷಿ ಸೇವಿಸುವುದರಿಂದ ಕೂದಲು ಉದುರುವಿಕೆ ತ್ವರಿತವಾಗಿ ತಡೆಯಬಹುದು.
ವಾಲ್ನಟ್ (Walnut)
ವಾಲ್ನಟ್ನಲ್ಲಿ ಬಯೋಟಿನ್ ಪ್ರಚುರ ಪ್ರಮಾಣದಲ್ಲಿದೆ. ನಿಯಮಿತವಾಗಿ ವಾಲ್ನಟ್ ಸೇವಿಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ ಹಾಗೂ ಉದುರುವಿಕೆ ಕಡಿಮೆಯಾಗುತ್ತದೆ.
ರಾಗಿ
ರಾಗಿ ಹಿಟ್ಟಿನಿಂದ ಮಾಡಿದ ದೋಸೆ, ಪಾಯಸ ಅಥವಾ ಸೂಪ್ ಸೇವನೆ ಕೂದಲು ಬೆಳವಣಿಗೆಗೆ ಬಹಳ ಪ್ರಯೋಜನಕಾರಿ. ರಾಗಿಯಲ್ಲಿ ಉಕ್ಕು, ಕ್ಯಾಲ್ಸಿಯಂ, ಹಾಗೂ ಫೋಲೇಟ್ ಅಂಶಗಳು ಹೆಚ್ಚಾಗಿವೆ.
ದಾಳಿಂಬೆ
ದಾಳಿಂಬೆಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಂ, ಮತ್ತು ಪ್ರೋಟೀನ್ಗಳು ಹೇರಳವಾಗಿವೆ. ಇದು ದೇಹದಲ್ಲಿ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಇದನ್ನು ನೋಡಿ : Vande Mataram: ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಂದೇ ಮಾತರಂ ಕಡ್ಡಾಯ: ಸಿಎಂ ಯೋಗಿ ಖಡಕ್ ಆದೇಶ




