Davanagere: ದಾವಣಗೆರೆ ನಗರದ ಯುವತಿಯೊಬ್ಬಳಿಗೆ ಮ್ಯಾಟ್ರಿಮೋನಿಯಲ್ಲಿ (Matrimony ) ಪರಿಚಯವಾಗಿದ್ದ ವ್ಯಕ್ತಿಯೊಬ್ಬ 25.93 ಲಕ್ಷ ರೂ. (Money) ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Davanagere : ದಾವಣಗೆರೆ ನಗರದ ಯುವತಿಯೊಬ್ಬಳಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ 25.93 ಲಕ್ಷ ರೂ. ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ರೈಲ್ವೆ ಉದ್ಯೋಗ ಭರವಸೆ ನೀಡಿಕೊಂಡು ವಂಚನೆ
ಇತ್ತೀಚೆಗೆ ಮ್ಯಾಟ್ರಿಮೋನಿ ತಾಣಗಳ ಮೂಲಕ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮ್ಯಾಟ್ರಿಮೋನಿಯಲ್ಲಿ ಯುವತಿಗೆ ಮಂಡ್ಯದ ಮಧು ಎಂಬುವನ ಪರಿಚಯವಾಗಿದ್ದು, ಆತನಿಂದ ಸಹೋದರನಿಗೆ ರೈಲ್ವೆ ಉದ್ಯೋಗದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದಿದ್ದಾನೆ.
ಇದನ್ನೂ ಓದಿ: Rukmini Vasanth : ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ನಕಲಿ ಕರೆ — ಸೈಬರ್ ಕಳ್ಳರ ಕಾಟ..!
ಮ್ಯಾಟ್ರಿಮೋನಿಯಲ್ಲಿ ಪರಿಚಯ – 25.93 ಲಕ್ಷ ರೂ. ವಂಚನೆ ಆರೋಪ
ಇನ್ನು ಯುವತಿ ಆತನ ಮಾತನ್ನು ನಂಬಿ 25.93 ಲಕ್ಷ ರೂ. ಹಣ ನೀಡಿದ್ದಾಳೆ. ಆದರೆ ಆತ ಕೆಲಸವನ್ನು ಒದಗಿಸದೆ ಆ ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ವಂಚನೆ ಕುರಿತ ಅರಿವು ಆಗುತ್ತಲೇ ಯುವತಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಮ್ಯಾಟ್ರಿಮೋನಿ ತಾಣಗಳಲ್ಲಿ ಎಚ್ಚರಿಕೆ ಅಗತ್ಯ
ಈ ಪ್ರಕರಣ ಮ್ಯಾಟ್ರಿಮೋನಿ ಜಾಲ ತಾಣಗಳ ಮೂಲಕ ನಡೆಯುವ ವಂಚನೆಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಇಂತಹ ಮೋಸಗಳು ಆಗಾಗ್ಗೆ ನಡೆದು ಅಮಾಯಕ ಯುವಕ ಯುವತಿಯರು ಒಂದಲ್ಲ ಒಂದು ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. ಮ್ಯಾಟ್ರಿಮೋನಿ ತಾಣಗಳಲ್ಲಿ ಪರಿಚಯವಾಗುವವರ ಜತೆ ಗೆಳೆತನ, ಹಣಕಾಸು ವ್ಯವಹಾರಗಳನ್ನು ನಡೆಸುವ ಮುನ್ನ ಹೆಚ್ಚಿನ ಪರಿಶೀಲನೆ, ಎಚ್ಚರಿಕೆ ಅಗತ್ಯ.
MUST WATCH: CYBER FRAUD | ಸಂಸದ ಸುಧಾಕರ್ ಪತ್ನಿಗೆ ಸೈಬರ್ ವಂಚನೆ ಕಳೆದು ಕೊಂಡಿದ್ದ 14 ಲಕ್ಷರೂ.




