Dulquer Salman Buys New Car : ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಂಗ್ರಹದಲ್ಲಿ ಜಗತ್ತಿನ ಅತ್ಯುತ್ತಮ ಕಾರುಗಳಿವೆ. ಒಂದರ ಹಿಂದೊಂದು ಹೊಸ ಕಾರುಗಳನ್ನು ಅವರು ಖರೀದಿ ಮಾಡುತ್ತಲೇ ಇರುತ್ತಾರೆ.

ಕಳೆದ ತಿಂಗಳಷ್ಟೇ ನಟ ದುಲ್ಕರ್ ಸಲ್ಮಾನ್ (Dulquer Salman) ಅವರ ಮನೆಯ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಬಳಿ ಇದ್ದ ಎಲ್ಲಾ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು.
ಸೂಕ್ತ ದಾಖಲೆಗಳ ಕೊರತೆಯಿಂದ ಎರಡು ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಸಹ ಪಡೆದಿದ್ದರು.
ದುಲ್ಕರ್ ಸಲ್ಮಾನ್ ಅವರು ಅಕ್ರಮವಾಗಿ ಹೊರದೇಶದಿಂದ ಕಾರುಗಳನ್ನು ತಂದಿದ್ದಾರೆ ಎಂಬ ಆರೋಪವೂ ಬಂದಿತ್ತು. ಈ ವಿವಾದದ ಮಧ್ಯದಲ್ಲಿಯೇ ಅವರು ಮತ್ತೊಂದು ಹೊಸ ಕಾರು ಖರೀದಿ ಮಾಡಿದ್ದಾರೆ.
ಹೊಸ ಕಾರು: ಲ್ಯಾಂಡ್ ರೋವರ್ ಡಿಫೆಂಡರ್ 110 ಆಕ್ಟಾ
ದುಲ್ಕರ್ ಸಲ್ಮಾನ್ ಅವರು ಲ್ಯಾಂಡ್ ರೋವರ್ ಡಿಫೆಂಡರ್ 110 ಆಕ್ಟಾ ಕಾರನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಈ ಹಿಂದೆಯೇ ಅವರ ಬಳಿ ಡಿಫೆಂಡರ್ ಮಾದರಿಯ ಕಾರು ಇದ್ದರೂ, ಈ ಬಾರಿ ಖರೀದಿಸಿರುವುದು ಅದರ ವಿಶೇಷ ಆವೃತ್ತಿ (Special Edition) ಆಗಿದೆ.
ಈ ಕಾರಿನಲ್ಲಿ 4.4 ಲೀಟರ್ ಟ್ವಿನ್ ಟರ್ಬೊ ಎಂಜಿನ್ ಇದೆ. ಕೇವಲ ನಾಲ್ಕು ಸೆಕೆಂಡ್ನಲ್ಲಿ 0 ರಿಂದ 100 ಕಿ.ಮೀ ವೇಗ ತಲುಪುತ್ತದೆ. ಇದು ಆಲ್-ವೀಲ್ ಡ್ರೈವ್ (All Wheel Drive) ಕಾರಾಗಿದ್ದು, ಕಚ್ಚಾ ರಸ್ತೆ ಅಥವಾ ಬೆಟ್ಟದ ಹಾದಿಯಲ್ಲಿಯೂ ಸಹ ಸುಲಭವಾಗಿ ಚಲಿಸುತ್ತದೆ. ಈ ಕಾರಿನ ಅಂದಾಜು ಬೆಲೆ ಸುಮಾರು ₹3 ಕೋಟಿಯಾಗಿದೆ.
ಇದನ್ನು ನೋಡಿ : ಪ್ರೀತಿಸಿದ ಯುವಕ ಕೈ ಕೊಟ್ಟಿದ್ದರಿಂದ ಯುವತಿ ಆತ್ಮಹ* ತ್ಯೆ : ಯುವತಿ ಪೋಷಕರಿಂದ ಶವವಿಟ್ಟು ಪ್ರತಿಭಟನೆ

ದುಲ್ಕರ್ ಸಲ್ಮಾನ್ರ ಕಾರು ಸಂಗ್ರಹ — ಒಂದು ಐಶಾರಾಮಿ ಪ್ರಪಂಚ
ಅಂದಹಾಗೆ ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳ ಸಂಗ್ರಹ ಸಾಮಾನ್ಯದ್ದಲ್ಲ. ಎಲ್ಲ ಜಗಪ್ರಸಿದ್ಧ ಐಶಾರಾಮಿ ಬ್ರ್ಯಾಂಡಿನ ಒಂದಕ್ಕಿಂತಲೂ ಹೆಚ್ಚು ಐಶಾರಾಮಿ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ಇಟ್ಟುಕೊಂಡಿದ್ದಾರೆ.
ಮರ್ಸಿಡೀಸ್, ಬೆಂಜ್, ಪೋರ್ಷೆ, ಫೆರಾರಿ, ವೋಲ್ವೋ ಇನ್ನೂ ಕೆಲವು ಜಗತ್ತಿನ ನಂ1 ಕಾರು ಕಂಪೆನಿಗಳ ಕಾರುಗಳಿವೆ. ಅದರೂ ಸಾಮಾನ್ಯ ಕಾರುಗಳಲ್ಲ, 80, 90ರ ದಶಕದ ಅತ್ಯುತ್ತಮ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿದ್ದಾರೆ.
ಹಳೆಯ ಕ್ಲಾಸಿಕ್ ಕಾರುಗಳಿಗೂ ಆಸಕ್ತಿ
ದುಲ್ಕರ್ ಸಲ್ಮಾನ್ ಕೇವಲ ಹೊಸ ಕಾರುಗಳಷ್ಟೇ ಅಲ್ಲ, ಹಳೆಯ ಕ್ಲಾಸಿಕ್ ಮತ್ತು ಐಕಾನಿಕ್ ಕಾರುಗಳಿಗೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ 80 ಮತ್ತು 90ರ ದಶಕದ BMW M3 series (E28, E30, E34, E36, E46, E92) ಕಾರುಗಳಿವೆ.

ಇದನ್ನು ಓದಿ : BBK 12 : ಚಪ್ಪಲಿ ಮ್ಯಾಟರ್ – ಮತ್ತೊಮ್ಮೆ ಅಶ್ವಿನಿ ಗೌಡರ ಮುಖವಾಡ ಕಳಚಿದ ಸುದೀಪ್




