Cinema News: ರಾಜಮೌಳಿ ನಿರ್ದೇಶನ ಮಾಡುತ್ತಿರುವ ಬಿಗ್ ಬಜೆಟ್ ಮೂವಿಯಲ್ಲಿ ಪೃಥ್ವಿರಾಜ್ ಅಭಿನಯಿಸುತ್ತಿದ್ದು, ಪೃಥ್ವಿರಾಜ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನ ಬಿಡುಗಡೆ ಮಾಡಲಾಗಿದೆ.

Cinema News: ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ SSMB29 ನಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ
SSMB29 ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಪ್ರೀಯಾಂಕ ಚೋಪ್ರಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ
ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್
ಪೋಸ್ಟರ್ನಲ್ಲಿ ಪೃಥ್ವಿರಾಜ್ ಕಪ್ಪು ಬಣ್ಣದ ಡ್ರೆಸ್ ಧರಿಸಿ, ರೋಬೋಟಿಕ್ ವೀಲ್ಚೇರ್ನಲ್ಲಿ ಕುಳಿತಿರುವ ಕೋಪದಲ್ಲಿ ಭಯ ಮೂಡುವಂತೆ ನೋಡುತ್ತಿದ್ದಾರೆ. ಫೈಟ್ ಸೀನ್ ಇದಾಗಿದ್ದು ಸಿನಿಮಾದಲ್ಲಿ ಪೃಥ್ವಿರಾಜ್ ವಿಶೇಷ ಚೇತನ ಪಾತ್ರದಲ್ಲಿ ಅಭಿನಯ ಮಾಡುತ್ತಿರುವುದು ಗೊತ್ತಾಗುತ್ತದೆ. ಈ ದೃಶ್ಯವು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Trisha Krishnan : ನಟಿ ತ್ರಿಶಾ ಮ್ಯಾರೇಜ್ ಬಗ್ಗೆ Big ಅಪ್ ಡೇಟ್..!
ಇನ್ ಸ್ಟಾದಲ್ಲಿ ಮಾಹಿತಿ ಹಂಚಿಕೊಂಡ ರಾಜಮೌಳಿ
ಸ್ವತಃ ರಾಜಮೌಳಿ ಅವರೇ ಈ ಮೊದಲ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಮೊದಲ ಶಾಟ್ ತೆಗೆದ ಮೇಲೆ ಪೃಥ್ವಿ ಬಳಿ ಹೋಗಿ ನೀನು ಫೈನಸ್ಟ್ ಆ್ಯಕ್ಟರ್ ಎಂದು ಹೇಳಿದೆ. ರೋಬೋಟಿಕ್ ವೀಲ್ಚೇರ್ ಮೇಲೆ ಕುಂಭನಾಗಿ ಕುಳಿತಿರುವ ಪೃಥ್ವಿರಾಜ್ ಎಲ್ಲರ ಮುಂದೆ ಬರಲಿದ್ದಾರೆ.

15 ನವೆಂಬರ್ ರಂದು ಟೈಟಲ್ ಮತ್ತು ಟೀಸರ್ ಬಿಡುಗಡೆ
ಚಿತ್ರತಂಡವು 15 ನವೆಂಬರ್ 2025 ರಂದು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಚಿತ್ರದ ಟೈಟಲ್ ಮತ್ತು ಪ್ರಮುಖ ಶಾಟ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಈ ಕಾರ್ಯಕ್ರಮದಲ್ಲಿ ಮಹೇಶ್ ಬಾಬು, ಪ್ರೀಯಾಂಕ ಚೋಪ್ರಾ ಮತ್ತು ಪೃಥ್ವಿರಾಜ್ ಸೇರಿದಂತೆ ಪ್ರಮುಖ ನಟರ ಉಪಸ್ಥಿತಿ ನಿರೀಕ್ಷಿಸಲಾಗಿದೆ.
MUST WATCH: EKKA REVIEW | ಎಕ್ಕ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟ ಅಭಿಮಾನಿಗಳು




