PG AYUSH: 2025ನೇ ಸಾಲಿನ ಸ್ನಾತಕೋತ್ತರ ಆಯುಷ್ ಕೋರ್ಸುಗಳ (course) ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್ಲೈನ್ ಮೂಲಕ ಅರ್ಜಿ ಕರೆದಿದೆ.

PG Ayush: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(KEA) 2025ನೇ ಸಾಲಿನ ಸ್ನಾತಕೋತ್ತರ ಆಯುಷ್ (PG AYUSH) ಕೋರ್ಸುಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಣೆ
ಎಐಎಪಿಜಿಇಟಿ-2025 (AIAPGET 2025) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ನವೆಂಬರ್ 10ರ ಸಂಜೆ 4 ಗಂಟೆಯೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು.
ನೋಂದಣಿ ಶುಲ್ಕ
ನೋಂದಣಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 2,000, ಹಾಗೂ ಪ.ಜಾ/ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 1,000 ಆಗಿದೆ. ಈ ಶುಲ್ಕವನ್ನು ನ.10ರ ಸಂಜೆ 6 ಗಂಟೆಯೊಳಗೆ ಆನ್ಲೈನ್ ಮೂಲಕ ಪಾವತಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: RECRUITMENT| KEA| KEA ನೇಮಕಾತಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ದಾಖಲೆಗಳ ಪರಿಶೀಲನೆ ಮತ್ತು ಮಾಹಿತಿ
ವೇಳಾಪಟ್ಟಿ, ದಾಖಲಾತಿ ಪರಿಶೀಲನೆ, ಸಲ್ಲಿಸಬೇಕಾದ ಮೂಲ ದಾಖಲೆಗಳು ಮತ್ತು ಇತರ ಮಾಹಿತಿಗಾಗಿ ಅಭ್ಯರ್ಥಿಗಳು http://kea.kar.nic.in ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
ಅರ್ಹತಾ ಷರತ್ತುಗಳು ಹಾಗೂ ಇನ್ನಿತರ ವಿವರಗಳನ್ನು ಎಐಎಪಿಜಿಇಟಿ–2025ರ ಮಾಹಿತಿ ಪುಸ್ತಕದಲ್ಲಿ ಹಾಗೂ ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
MUST WATCH: KEA ಸೀಟ್ ಬ್ಲಾಕಿಂಗ್ ದಂಧೆಕೋರನ ಜೊತೆ ವೇದಿಕೆ ಹಂಚಿಕೊಂಡ ವಿ.ಸೋಮಣ್ಣ




