Bengaluru : ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿಯಾಗಿರುವ ಘಟನೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ.

Bengaluru : ಸಿಮೆಂಟ್ ಮಿಕ್ಸರ್ ಲಾರಿಗೆ (Cement Mixer Truck) ವಿದ್ಯುತ್ ವೈರಿಂಗ್ ತಂತಿ ತಗುಲಿ ಎಳೆದೊಯ್ದ ಪರಿಣಾಮ, ಮನೆಯ ಗೋಡೆ ಕುಸಿದು ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಮೃತ ಮಗುವನ್ನು ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (1 ವರ್ಷ 8 ತಿಂಗಳು) ಎಂದು ಗುರುತಿಸಲಾಗಿದೆ.
ಘಟನೆ ವಿವರ
ನವೆಂಬರ್ 7ರ (ನೆನ್ನೆ) ಸಂಜೆ ಸಮಯದಲ್ಲಿ ಹೊಸ ಮನೆಯ ಮೋಲ್ಡಿಂಗ್ ಕೆಲಸ ಮುಗಿಸಿ ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು. ಆ ಸಂದರ್ಭದಲ್ಲಿ ಲಾರಿಯ ಮೇಲೆ ಹಾದು ಹೋಗಿದ್ದ ವಿದ್ಯುತ್ ವೈರಿಂಗ್ ತಂತಿ ವಾಹನಕ್ಕೆ ಸಿಲುಕಿಕೊಂಡಿದೆ. ಸ್ಥಳೀಯರು ಕೂಗಿಕೊಂಡರೂ, ಚಾಲಕ ಅದನ್ನು ಗಮನಿಸದೇ ಲಾರಿ ಚಲಾಯಿಸಿದ್ದರಿಂದ ವೈರಿಂಗ್ ಕಂಬ ಕಿತ್ತು ಬಂದಿದೆ.
ಅಲ್ಲದೇ ಮನೆಯ ಗೋಡೆ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದೆ.ಇನ್ನು ಮಗುವಿನ ಶವವನ್ನು ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
ಇದನ್ನು ಓದಿ : ದಿನ ಭವಿಷ್ಯ 8 ನವೆಂಬರ್ 2025

ಪೊಲೀಸ್ ತನಿಖೆ ಆರಂಭ
ಈ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಪೋಷಕರ ಆಕ್ರಂದನ
ಮಗುವಿನ ಆಕಸ್ಮಿಕ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿರ್ಲಕ್ಷಿತ ವಿದ್ಯುತ್ ತಂತಿಗಳ ನಿರ್ವಹಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : ಫಸ್ಟ್ನೈಟ್ ವಿಡಿಯೋ ಇಟ್ಕೊಂಡು ಹೆಂಡ್ತಿಗೆ ಗಂಡನಿಂದಲೇ ಬ್ಲ್ಯಾಕ್ಮೇಲ್




