Bhavya Gowda Buys New Car : ಭವ್ಯಾ ಗೌಡ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವರ ಮನೆಗೆ ಹೊಸ ಅತಿಥಿಯ ಆಗಮವಾಗಿದೆ.

ಟೆಲಿವಿಷನ್ ಮೂಲಕ ಜನಪ್ರಿಯರಾದ ಕರ್ಣನ ಪ್ರೀತಿಯ ಕಣ್ಮಣಿ ನಿಧಿ ಅಲಿಯಾಸ್ ಭವ್ಯಾ ಗೌಡ (Bhavya Gowda) ಇತ್ತೀಚಿಗೆ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.
ಹೊಸ ಕಾರು ಖರೀದಿಸಿದ ಭವ್ಯಾ ಗೌಡ
ಭವ್ಯಾ ಗೌಡ ತಮ್ಮ ಕನಸಿನ ಕಾರು ಸ್ಕೋಡಾ ಕೈಲಾಕ್ (Skoda Kylak) ಖರೀದಿ ಮಾಡಿದ್ದಾರೆ. ಅಪ್ಪ–ಅಮ್ಮ, ಸಹೋದರಿಯರ ಜೊತೆ ಸೇರಿ ಕಾರ್ ಖರೀದಿ ಮಾಡಿದ ಭವ್ಯಾ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇದನ್ನು ನೋಡಿ : ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು
ಇನ್ಸ್ಟಾಗ್ರಾಂನಲ್ಲಿ ಹಂಚಿದ ಸಂತೋಷದ ಕ್ಷಣಗಳು
ಹೊಸ ಕಾರಿನ ವಿಡಿಯೋವನ್ನು “Welcome Home” ಶೀರ್ಷಿಕೆಯಿಂದ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಭವ್ಯಾ ಗೌಡ, ನಂತರ ಕುಟುಂಬ ಸಮೇತ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. “ಅಮ್ಮನ ಕೊಡುಗೆ” ಎಂದು ಕ್ಯಾಪ್ಷನ್ ಹಾಕಿಕೊಂಡು ಫೋಟೋ ಹಂಚಿಕೊಂಡಿದ್ದಾರೆ.
ಹಾಡಿನ ಮೂಲಕ ಖುಷಿ ವ್ಯಕ್ತಪಡಿಸಿದ ಭವ್ಯಾ
ಕೇಕ್ ಕತ್ತರಿಸಿದ ನಂತರ ಭವ್ಯಾ “ನಿನ್ನ ಟೈಂ ಕೂಡ ಬರ್ತದೆ ಮಗಾ, ಹ್ಯಾಪಿ ಆಗಿದೆ ನನಗೆ ಹ್ಯಾಪಿ ಆಗಿದೆ” ಎಂಬ ಹಾಡಿನ ಮೂಲಕ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಹೀಗೆ ಖುಷಿಯಾಗಿರಿ
ಭವ್ಯಾ ಗೌಡ ಕಾರ್ ಖರೀದಿ ಮಾಡಿದ ಸುದ್ದಿ ಕೇಳಿ ಫ್ಯಾನ್ಸ್ ಸಂತೋಷಗೊಂಡಿದ್ದಾರೆ. ಹೀಗೆ ಖುಷಿಯಾಗಿರಿ ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಭವ್ಯಾ ಗೌಡ ಖರೀದಿ ಮಾಡಿರುವ ಕಾರಿನ ಬೆಲೆ 16.2 ಲಕ್ಷದಿಂದ ಶುರುವಾಗುತ್ತದೆ. 1.5 ಲೀಟರ್ ಪೆಟ್ರೋಲ್ ಆಡಿಷನ್ ಬೆಲೆ 22.56 ಲಕ್ಷವಿದೆ.
ಇದನ್ನು ಓದಿ : Hassan : ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರೇಯಸಿ ಆತ್ಮಹತ್ಯೆ




