Madalur Lake : ಕಳೆದ ಕೆಲವು ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಜಿಲ್ಲೆಗೆ ಹೇಮಾವತಿ ನದಿ ನೀರು ಹರಿಯುತ್ತಿದೆ.

ಕಳೆದ ಕೆಲವು ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಶಿರಾ ಜಿಲ್ಲೆಗೆ ಹೇಮಾವತಿ ನದಿ ನೀರನ್ನು ಬಿಡಲಾಗ್ತಿದೆ. ಇದ್ರಿಂದ ಹೇಮಾವತಿ ನೀರಿನಿಂದ ಶಿರಾ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಬಹತೇಕ ಕೆರೆಗಳು ಭರ್ತಿಯಾಗ್ತಿವೆ.
ಮೂರನೇ ಬಾರಿ ತುಂಬಿದ ಮದಲೂರು ಕೆರೆ
ಇನ್ನು ದಶಕಗಳಿಂದ ಬರಿದಾಗಿದ್ದ ಮದಲೂರು ಕೆರೆ, ಈ ಬಾರಿ ಸುರಿದ ಅಲ್ಪ ಸ್ವಲ್ಪ ಮಳೆಯ ಜೊತೆಗೆ ಹೇಮಾವತಿ ನದಿ ನೀರು ಹರಿದ ಪರಿಣಾಮ ಮೂರನೇ ಬಾರಿಗೆ ತುಂಬಿದೆ. ಹಲವಾರು ಊರಿನ ಕೆರೆಗಳು ದಶಕಗಳ ಬಳಿಕ ತುಂಬಿದ್ದು, ಗ್ರಾಮಸ್ಥರಲ್ಲಿ ಸಂತೋಷ ಮನೆಮಾಡಿದೆ.
ಇದನ್ನು ಓದಿ : ಟೀಮ್ ಇಂಡಿಯಾಗೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ
ಕೋಡಿ ಬಲಿ ಆಚರಣೆ
ಕಳೆದ ಬಾರಿ, ಕೆರೆ ಕೋಡಿ ಬಿದ್ದಾಗ ಕೋಣ ಬಲಿ ಮತ್ತು ವ್ಯಕ್ತಿಯ ತಲೆ ಮೇಲೆ ರುಂಡವನ್ನಿಟ್ಟು ಮೆರವಣಿಗೆ ನಡೆಸಿದ ಫೋಟೋಗಳು ವೈರಲ್ ಆಗಿತ್ತು. ಈ ಬಾರಿಗೆ ಅಪರೂಪವಾಗಿ ತುಂಬಿದ ಕೆರೆಯ ಕೋಡಿಯಿಂದ ಊರಿಗೆ ಯಾವುದೇ ಹಾನಿ ಉಂಟಾಗದಂತೆ, ಕೋಣವನ್ನು ಸುರಕ್ಷಿತ ಸ್ಥಳದಲ್ಲಿ ಬಲಿಕೊಡಲಾಗಿದೆ.
ರಾಜಕೀಯ ದೃಷ್ಟಿಕೋನ
ಹಿಂದಿನ ಚುನಾವಣೆಗಳಲ್ಲಿ ಮದಲೂರು ಕೆರೆಗೆ ನೀರು ತುಂಬಿಸುವುದೇ ರಾಜಕೀಯ ನಾಯಕರ ಪ್ರಮುಖ ಆಶ್ವಾಸನೆ ಆಗಿದ್ದು, ಪ್ರತಿ ಬಾರಿ ಚುನಾವಣೆಯ ಸಮಯದಲ್ಲಿ ಇದು ಗಮನ ಸೆಳೆದಿತ್ತು. ಈಗ ಮೂರನೇ ಬಾರಿ ಕೋಡಿ ಬಿದ್ದಿದೆ.
ಇದನ್ನು ನೋಡಿ : ಜನರೇ ಹುಷಾರ್…ಹುಷಾರ್…. ಸಾವಿಗೆ ಕಾದಿವೆ ವಿದ್ಯುತ್ ಕಂಬಗಳು




