BBK 12: ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಮನೆಯಲ್ಲಿ ಮತ್ತೆ ಗಲಾಟೆ ಉಂಟಾಗಿದೆ . ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?

BBK S12: ರಿಷಾ ಮತ್ತು ಗಿಲ್ಲಿ ನಡುವೆ ಬಿರುಕು
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಮನೆಯಲ್ಲಿ ಮತ್ತೆ ಗಲಾಟೆ ಉಂಟಾಗಿದೆ. ರಿಷಾ (Risha) ಅವರ ಅತಿರೇಕದ ವರ್ತನೆಯಿಂದ ಗಿಲ್ಲಿ (Gilli) ಜೊತೆ ಭಾರೀ ವಾಗ್ವಾದ ನಡೆದಿದೆ. ಬೆಳಗಿನ ಪ್ರೋಮೋ ಔಟ್ ಆದ ತಕ್ಷಣವೇ ಈ ಘಟನೆ ವೈರಲ್ ಆಗಿದೆ.
ನೆಮ್ಮದಿ ಹಾಳು ಮಾಡಿದ್ರು ರಿಷಾ?
ಸ್ಪರ್ಧಿ ಅಭಿಷೇಕ್ ಅವರ ಪ್ರಕಾರ, “ಮನೆಯ ನೆಮ್ಮದಿ ಹಾಳಾಗೋದು ರಿಷಾ ಅವರಿಂದಲೇ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಗಿಲ್ಲಿ ಕೂಡ ತಿರುಗಿ ಉತ್ತರವಾಗಿ,“ನಿನ್ನ ಮುಖವಾಡ ಈಗಾಗಲೇ ಕಳಚಿ ಸ್ವಿಮ್ಮಿಂಗ್ ಪೂಲ್ ಅಲ್ಲಿ ಕೊಚ್ಚಿಕೊಂಡು ಹೋಗಿದೆ”
ಎಂದು ತೀವ್ರ ವ್ಯಂಗ್ಯ ಮಾಡಿದ್ದಾರೆ.
ರಿಷಾ ವಿರುದ್ಧ ಸ್ಪರ್ಧಿಗಳ ಅಸಮಾಧಾನ
ರಘು ಅವರು ಹೇಳಿದ್ದು ಹೀಗಾಗಿದೆ —ನಾನು ಮನೆಯಲ್ಲಿ ಹೇಗಾದರೂ ಇರ್ತೀನಿ. ಆದರೆ ಈ ರೀತಿಯ ವರ್ತನೆ ಮಾಡಿದ್ರೆ ಯಾರೂ ಸಹಿಸಲ್ಲ. ಈ ನಡವಳಿಕೆ ಬಿಗ್ ಬಾಸ್ ನಿಯಮಗಳಿಗೆ ವಿರುದ್ಧ”ಎಂದು ಸ್ಪಷ್ಟವಾಗಿ ಹೇಳಿದರು.
ಈ ಸಂದರ್ಭದಲ್ಲಿಯೇ ರಿಷಾ ಅವರ ಮುಖಕ್ಕೆ ಮಸಿ ಬಳಿಯುವ ಸನ್ನಿವೇಶವೂ ನಡೆಯಿತು.
MUST READ : BBK S12 : ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ – ಮನೆಯಿಂದ ಎಲಿಮಿನೇಟ್ ಆಗ್ತಾರಾ ??
ಬಾತ್ರೂಂ ಘಟನೆಯಿಂದ ಉಂಟಾದ ಗಲಾಟೆ
ಘಟನೆ ಬಾತ್ರೂಂನಲ್ಲಿ ಆರಂಭವಾಯಿತು. ಗಿಲ್ಲಿ, ರಿಷಾ ಗೌಡ ಬಳಿ ಬಕೆಟ್ ಕೇಳಿದಾಗ ಪ್ರತಿಕ್ರಿಯೆ ಸಿಕ್ಕಿಲ್ಲ. ಅದರಿಂದ ಗಿಲ್ಲಿ ಕೋಪಗೊಂಡು ರಿಷಾ ಅವರ ಬಟ್ಟೆಗಳನ್ನು ನೆಲದ ಮೇಲೆ ಇಟ್ಟಿದ್ದಾರೆ. ಬಳಿಕ ರಿಷಾ ಬಾತ್ರೂಂನಿಂದ ಹೊರಬಂದು ರೊಚ್ಚಿಗೆದ್ದಿದ್ದಾರೆ ಹಾಗೂ ಗಿಲ್ಲಿಯ ಬಟ್ಟೆಗಳನ್ನು ತಳ್ಳಿದ್ದಾರೆ.
ಈ ವೇಳೆ ಅಶ್ವಿನಿಗೌಡ ಮಧ್ಯಪ್ರವೇಶಿಸಿ, “ನೀನು ಸಹ ಹೀಗೆ ಮಾಡಬೇಡ” ಎಂದು ಬುದ್ಧಿವಾದ ಹೇಳಿದರೂ, ರಿಷಾ ಕೋಪ ತಣಿಸಲಿಲ್ಲ. ಇಬ್ಬರ ನಡುವೆ ಕೈಕೈ ಮಿಲಾಯಿಸಿದ ವೀಡಿಯೋ ಕೂಡ ಸಿಕ್ಕಿದೆ.
Bigg Boss ನಿಯಮ ಉಲ್ಲಂಘನೆ: ರಿಷಾ ಮೇಲೆ ಕ್ರಮವೇ?
ಬಿಗ್ ಬಾಸ್ ಮನೆಯಲ್ಲಿ ದೈಹಿಕ ಹಲ್ಲೆ (Physical Assault) ಮಾಡಿದರೆ ತಕ್ಷಣವೇ ಎಲಿಮಿನೇಷನ್ ನಿಯಮ ಇದೆ.
ಈ ಹಿನ್ನೆಲೆಯಲ್ಲಿ, ರಿಷಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ಕಳೆದ ಸೀಸನ್ಗಳಲ್ಲಿ ಇಂತಹ ಘಟನೆಗಳಿಗೆ ತಕ್ಷಣ ಕ್ರಮ ಕೈಗೊಂಡಿದ್ದ ಬಿಗ್ ಬಾಸ್ ತಂಡ, ಈ ಬಾರಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ವೀಕೆಂಡ್ ಎಪಿಸೋಡ್ನಲ್ಲಿ ರಿಷಾ ಎಲಿಮಿನೇಟ್ ಆಗ್ತಾರಾ? ಎಂಬುದು ಇದೀಗ ಪ್ರೇಕ್ಷಕರ ಕುತೂಹಲವಾಗಿದೆ.
ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಮತ್ತೆ ಗಲಾಟೆಯ ಸಂಚಲನ! ರಿಷಾ ಅವರ ಅತಿರೇಕದ ನಡವಳಿಕೆ ವೀಕ್ಷಕರನ್ನ ಎರಡು ಭಾಗಗಳಾಗಿ ವಿಭಜಿಸಿದೆ.
ಕೆಲವರು ಅವರನ್ನು ಬೆಂಬಲಿಸುತ್ತಿರುವರೆ, ಮತ್ತೊಬ್ಬರು ಬಿಗ್ ಬಾಸ್ ನಿಯಮ ಉಲ್ಲಂಘನೆ ಎಂದು ವಿರೋಧಿಸುತ್ತಿದ್ದಾರೆ. ಮುಂದಿನ ಎಪಿಸೋಡ್ನಲ್ಲಿ ಏನಾಗುತ್ತದೋ ಕಾದು ನೋಡಬೇಕು.
ಇದನ್ನು ನೋಡಿ : ಜಿಲ್ಲಾಸ್ಪತ್ರೆಯ ಮತ್ತೊಂದು ಯಡವಟ್ಟು! CM ಬರ್ತಾರೆ ಅಂತ ಶವಗಾರಕ್ಕೆ ತೇಪೆ




