NEWDELHI: ದೆಹಲಿ ಹೈಕೋರ್ಟ್ ದೇಶಾದ್ಯಂತ ಕಾನೂನು ವಿದ್ಯಾರ್ಥಿಗಳಿಗೆ ಮಹತ್ವದ ತೀರ್ಪು ನೀಡಿದೆ. ಕಡಿಮೆ ಹಾಜರಾತಿ ಇದ್ದರೂ ವಿದ್ಯಾರ್ಥಿಗಳು ಈಗ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಬಹುದು. ಈ ಬಗ್ಗೆ ಹೈಕೋರ್ಟ್ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.

NEWDELHI:ದೆಹಲಿ ಹೈಕೋರ್ಟ್ನ ತೀರ್ಪು ದೇಶಾದ್ಯಂತ ಲಕ್ಷಾಂತರ ಕಾನೂನು ವಿದ್ಯಾರ್ಥಿಗಳಿಗೆ ದೊಡ್ಡ ಪರಿಹಾರ ನೀಡಿದೆ. ಇನ್ನು ಮುಂದೆ ಕಡಿಮೆ ಹಾಜರಾತಿ ಇದ್ದರೂ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ಇರಲಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಮತ್ತು ನ್ಯಾಯಮೂರ್ತಿ ಅಮಿತ್ ಶರ್ಮಾ ಅವರ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಕಡ್ಡಾಯ ಹಾಜರಾತಿಯ ಕೊರತೆಯಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಬಿಡದೇ ಇರುವುದಿಲ್ಲ ಮತ್ತು ಮುಂದಿನ ಸೆಮಿಸ್ಟರ್ಗೆ ಹಾಜರಾಗುವುದಕ್ಕೂ ತಡೆ ಇರಬಾರದು ಎಂದು ಪೀಠ ಆದೇಶಿಸಿದೆ. ಹೈಕೋರ್ಟ್ ಕಾನೂನು ಕಾಲೇಜುಗಳಿಗೆ ನೀಡಿದ ನಿರ್ದೇಶನದಲ್ಲಿ, ಹಾಜರಾತಿಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪೂರ್ವ ಮಾಹಿತಿ ನೀಡಬೇಕು ಹಾಗೂ ಹಾಜರಾಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ದೈಹಿಕ ಅಥವಾ ಆನ್ಲೈನ್ ತರಗತಿಗಳನ್ನು ಆಯೋಜಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: POLITICAL NEWS: ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ವಿರೋಧ – ಡಿಸಿಎಂನಿಂದ ತಿರುಗೇಟು!
ಜೊತೆಗೆ ಕಾಲೇಜುಗಳು ನಿಗದಿಪಡಿಸುವ ಹಾಜರಾತಿ ನಿಯಮಗಳು ಭಾರತೀಯ ಬಾರ್ ಕೌನ್ಸಿಲ್ (BCI) ನ ನಿಯಮಗಳಿಗೆ ವಿರುದ್ಧವಾಗಿರಬಾರದು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಹಿಂದುಳಿದ ಹಿನ್ನೆಲೆಯ ಕಾನೂನು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ, ಹಿರಿಯ ವಕೀಲರು, ಕಾನೂನು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಇಂಟರ್ನ್ಶಿಪ್ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗವಾಗಿ ಪ್ರಕಟಿಸಲು ಬಿಸಿಐಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ತೀರ್ಪು ಕಾನೂನು ಶಿಕ್ಷಣದ ಸುಧಾರಣೆಯತ್ತ ಒಂದು ಪ್ರಮುಖ ಹೆಜ್ಜೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
MUST WATCH: ರಾಜ್ಯದಲ್ಲಿ ಮತ್ತೆ ಶುರುವಾಗುತ್ತೆ ವರುಣಾರ್ಭಟ ಯಾವ ಯಾವ ಜಿಲ್ಲೆಯಲ್ಲಿ ಹೇಗಿದೆ ಗೊತ್ತಾ




