BBK S12 : ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ಉಂಟಾಗಿದೆ! ಸ್ಪರ್ಧಿ ರಿಷಾ ಗೌಡ ಅವರು ಗಿಲ್ಲಿ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.

BBK S12 : ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ಉಂಟಾಗಿದೆ! ಸ್ಪರ್ಧಿ ರಿಷಾ ಗೌಡ ಅವರು ಗಿಲ್ಲಿ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ. ಈಗ, ಬಿಗ್ ಬಾಸ್ ನಿಯಮ ಪ್ರಕಾರ ರಿಷಾ ಅವರನ್ನು ತಕ್ಷಣ ಎಲಿಮಿನೇಟ್ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ದೈಹಿಕ ಹಲ್ಲೆ ಮಾಡಿದರೆ ತಕ್ಷಣ ಎಲಿಮಿನೇಷನ್…!
‘ಯಾರ ಮೇಲೂ ದೈಹಿಕ ಹಲ್ಲೆ ಮಾಡಬಾರದು’ ಎಂಬುದು Bigg Boss Kannada ನ ಪ್ರಮುಖ ನಿಯಮಗಳಲ್ಲಿ ಒಂದು.
ಈ ನಿಯಮ ಉಲ್ಲಂಘಿಸಿದ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಿಂದ ತಕ್ಷಣ ಹೊರಹಾಕಲಾಗುತ್ತದೆ.
ಹಿಂದಿನ ಸೀಸನ್ಗಳಲ್ಲಿ ಇಂತಹ ಘಟನೆಗಳು ನಡೆದಿದ್ದು, ರಂಜಿತ್ ಸೇರಿದಂತೆ ಹಲವು ಸ್ಪರ್ಧಿಗಳು ಇದೇ ಕಾರಣದಿಂದ ಎಲಿಮಿನೇಟ್ ಆಗಿದ್ದರು.
ಗಿಲ್ಲಿ ಮತ್ತು ರಿಷಾ ನಡುವೆ ಏನಾಯಿತು?
ಸೋರ್ಸ್ ಪ್ರಕಾರ, ಗಿಲ್ಲಿ ಅವರು ಬಾತ್ರೂಂನಲ್ಲಿ ಇದ್ದಾಗ ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಕೇಳಿಕೊಂಡಿದ್ದರು. ಆದರೆ, ರಿಷಾ ಅವರು ಅದಕ್ಕೆ ಸ್ಪಂದಿಸದೆ “ನನಗೆ ಗೊತ್ತಿದೆ ಏನು ಮಾಡಬೇಕು” ಎಂದು ಹೇಳಿದ್ದಾರೆ.
ಈ ನಂತರ ಗಿಲ್ಲಿ ಅವರು ರಿಷಾ ಅವರ ಬಟ್ಟೆಯನ್ನು ಬಾತ್ರೂಂ ಹೊರಗಿನ ನೆಲದ ಮೇಲೆ ಹಾಕಿದ್ದಾರೆ.
ಇದರಿಂದ ಕೋಪಗೊಂಡ ರಿಷಾ ಅವರು ಗಿಲ್ಲಿ ಮೇಲೆ ಓಡಿಹೋಗಿ ಕೈ ಮಾಡಿದ್ದಾರೆ ಮತ್ತು ತಳ್ಳಿದ್ದಾರೆ.
ಹಲ್ಲೆ ನಂತರ ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ, ಬಟ್ಟೆಗಳನ್ನು ಎಸೆದಿದ್ದಾರೆ ಮತ್ತು ಸೂಟ್ಕೇಸ್ ಒದ್ದಿದ್ದಾರೆ. ಈ ನಡೆ ಬಿಗ್ ಬಾಸ್ನ ಮೂಲ ನಿಯಮಗಳಿಗೆ ವಿರುದ್ಧವಾಗಿರುವುದರಿಂದ, ಈಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎನ್ನುವುದು ಕುತೂಹಲದ ವಿಷಯವಾಗಿದೆ.
ತೆಲುಗು ಬಿಗ್ ಬಾಸ್ನಲ್ಲಿ ಇದೇ ಘಟನೆ ನಡೆದಿತ್ತು
ಹಿಂದಿನ ತೆಲುಗು ಬಿಗ್ ಬಾಸ್ ಸೀಸನ್ನಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ.
ಮಹಿಳಾ ಸ್ಪರ್ಧಿಯ ಮೇಲೆ ಪುರುಷ ಸ್ಪರ್ಧಿ ಕಠಿಣವಾಗಿ ವರ್ತಿಸಿದ ಹಿನ್ನೆಲೆಯಲ್ಲಿ, ಅಕ್ಕಿನೇನಿ ನಾಗಾರ್ಜುನ ಅವರ ವೀಕೆಂಡ್ ಎಪಿಸೋಡ್ನಲ್ಲಿ ಆ ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಲಾಯಿತು.ಈಗ ಪ್ರೇಕ್ಷಕರು ಒಂದೇ ಪ್ರಶ್ನೆ ಕೇಳುತ್ತಿದ್ದಾರೆ —“ರಿಷಾ ಗೌಡ ಅವರನ್ನು ಕೂಡ ತಕ್ಷಣ ಎಲಿಮಿನೇಟ್ ಮಾಡಲಾಗುತ್ತದೆಯೇ?”
ಬಿಗ್ ಬಾಸ್ ತಂಡವು ಈ ಬಗ್ಗೆ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ವೀಕ್ಷಕರು ಕಾದು ನೋಡಬೇಕಿದ




