
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಇದೀಗ ಪ್ಯಾನ್ ಇಂಡಿಯಾ ಮಟ್ಟವನ್ನು ದಾಟಿ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
‘ಕಾಂತಾರ: ಚಾಪ್ಟರ್ 1’ನ ಪ್ರೀಮಿಯರ್ ಶೋ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಅಡ್ವಾನ್ಸ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರವಲ್ಲದೆ, ಯುರೋಪ್, ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ಲ್ಯಾಟಿನ್ ಅಮೆರಿಕ ಸೇರಿ ಹಲವಾರು ದೇಶಗಳಲ್ಲಿ ಮೊದಲಬಾರಿಗೆ ಕನ್ನಡ ಚಿತ್ರ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ.
‘ಕಾಂತಾರ’ ಚಾಪ್ಟರ್ 1 ಈ ಬಾರಿ ಕೇವಲ ಭಾರತೀಯ ಚಿತ್ರರಂಗವಲ್ಲ, ಜಾಗತಿಕ ಸಿನಿಮೋತ್ಸಾಹಿಗಳ ಗಮನ ಸೆಳೆಯುವ ಗುರಿಯೊಂದಿಗೆ ಹೊರಟಿದೆ. ಹಿಂದಿನ ‘ಕಾಂತಾರ’ ಬ್ಲಾಕ್ ಬಸ್ಟರ್ ಯಶಸ್ಸಿನಿಂದ, ಈ ಬಾರಿ ಹೊಸ ಪರಿಚಯವನ್ನೂ ಮಾಡಲಿದೆ. ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದ ಹಲವಾರು ಭಾಗಗಳಲ್ಲಿ ಈ ಸಿನಿಮಾದ ಅಸಾಧಾರಣ ಹೈಪ್ ನಿರ್ಮಾಣವಾಗಿದೆ.
ಉತ್ತರ ಅಮೆರಿಕನಲ್ಲಿ ಪ್ರತ್ಯಂಗಿರ ಯುಎಸ್ ಎಂಬ ಸ್ಥಳೀಯ ಭಾರತೀಯ ಮೂಲದ ಸಂಸ್ಥೆಗೆ ಸಿನಿಮಾದ ವಿತರಣೆ ಹಕ್ಕು ನೀಡಲಾಗಿದ್ದು, ಅಕ್ಟೋಬರ್ 01 ರಂದೇ ಅಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಅಕ್ಟೋಬರ್ 1 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನಗೊಳ್ಳಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಬಿಡುಗಡೆ ಆಗಲಿದೆ. ಟ್ರೈಲರ್ ಬಿಡುಗಡೆ ಮೂಲಕ ಸಿನಿಮಾದ ಪ್ರಚಾರಕ್ಕೆ ಅದ್ಧೂರಿ ಚಾಲನೆ ದೊರಕಲಿದ್ದು, ರಿಷಬ್ ಶೆಟ್ಟಿ ದೇಶದಾದ್ಯಂತ ಓಡಾಡಿ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರಚಾರವನ್ನು ಮಾಡಲಿದ್ದಾರೆ.




