Kitchen Recipe : ಬೇಗನೆ ತಯಾರಿಸಬಹುದಾದ, ಪ್ರೋಟೀನ್ ಸಮೃದ್ಧ ಮತ್ತು ಎಲ್ಲರಿಗೂ ಇಷ್ಟವಾಗುವ ಎಗ್ ಸ್ಯಾಂಡ್ವಿಚ್ (Egg Sandwich)

Kitchen Recipe : ರುಚಿಕರ ಮತ್ತು ಸೌಖ್ಯಕರ ಉಪಹಾರ
ಬೇಗನೆ ತಯಾರಿಸಬಹುದಾದ, ಪ್ರೋಟೀನ್ ಸಮೃದ್ಧ ಮತ್ತು ಎಲ್ಲರಿಗೂ ಇಷ್ಟವಾಗುವ ಎಗ್ ಸ್ಯಾಂಡ್ವಿಚ್ (Egg Sandwich) ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಟೀ ಜೊತೆ ಪರಿಪೂರ್ಣ ಆಯ್ಕೆ. ಕೆಲವೇ ಪದಾರ್ಥಗಳಲ್ಲಿ ರುಚಿಯಾದ ಸ್ಯಾಂಡ್ವಿಚ್ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು (Ingredients)
- ಮೊಟ್ಟೆ – 4
- ಬ್ರೆಡ್ ತುಂಡು – 4
- ಟೊಮೆಟೊ – 1 (ಸಣ್ಣದಾಗಿ ಕತ್ತರಿಸಿದ)
- ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದ)
- ಹಸಿ ಮೆಣಸಿನಕಾಯಿ – 2 (ಸಣ್ಣದಾಗಿ ಕತ್ತರಿಸಿದ)
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಹಾಲು – 2 ಚಮಚ
- ಎಣ್ಣೆ – 1 ಚಮಚ
- ಬೆಣ್ಣೆ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
MUST READ : Kitchen recipe : ರುಚಿಕರವಾದ ಮಶ್ರೂಮ್ ಫ್ರೈ ಮಾಡುವ ವಿಧಾನ Mushroom Fry Recipe
ಮಾಡುವ ವಿಧಾನ (Preparation Method)
ಹಂತ 1: ಮೊಟ್ಟೆ ಮಿಶ್ರಣ ತಯಾರಿಕೆ
ಮೊದಲು ನಾಲ್ಕು ಮೊಟ್ಟೆಗಳನ್ನು ಒಡೆದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು.
ಆಮೇಲೆ ಅದಕ್ಕೆ ಹಾಲು, ಉಪ್ಪು, ಕತ್ತರಿಸಿದ ಹಸಿ ಮೆಣಸಿನಕಾಯಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ತಯಾರಿಸಿ.
ಹಂತ 2: ಮೊಟ್ಟೆ ಫ್ರೈ ಮಾಡುವುದು
ಒಂದು ಪ್ಯಾನ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿದ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ, ಕಮ್ಮಿ ಉರಿಯಲ್ಲಿ ಫ್ರೈ ಮಾಡಿ ಮೊಟ್ಟೆ ಚೆನ್ನಾಗಿ ಬೇಯಿದ ಬಳಿಕ ಬದಿಗಿರಿಸಿ.
ಹಂತ 3: ಸ್ಯಾಂಡ್ವಿಚ್ ತಯಾರಿಕೆ
ಬ್ರೆಡ್ ತುಂಡುಗಳ ಒಂದೊಂದು ಬದಿಯಲ್ಲಿ ಬೆಣ್ಣೆ ಸವರಿ, ಅದರ ಮಧ್ಯದಲ್ಲಿ ಮೊಟ್ಟೆ ಫ್ರೈ ಇಡಿ.
ಬಿಸಿ ತವಾ ಮೇಲೆ ಇಟ್ಟು ಬ್ರೆಡ್ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
ಎರಡೂ ಬದಿಗಳು ಹೊಳೆಯುವಂತೆ ಹುರಿದ ನಂತರ ಹಾಟ್ ಎಗ್ ಸ್ಯಾಂಡ್ವಿಚ್ ಸವಿಯಲು ಸಿದ್ಧ!
ಟೊಮೆಟೊ ಸಾಸ್, ಮಯೊನೇಸ್ ಅಥವಾ ಗ್ರೀನ್ ಚಟ್ನಿ ಜೊತೆಗೆ ಸವಿಯಿರಿ.
ಈ ರೆಸಿಪಿ ಮಕ್ಕಳಿಗೂ, ಉದ್ಯೋಗಸ್ಥರಿಗೂ, ವಿದ್ಯಾರ್ಥಿಗಳಿಗೂ ತ್ವರಿತ ಉಪಹಾರವಾಗಿ ಪರಿಪೂರ್ಣ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




