Tridevi Ponn Birthday : ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮಗಳ ಮೊದಲನೇ ವರ್ಷದ ಹುಟ್ಟುಹಬ್ಬವನ್ನ ದಂಪತಿ ವಿಶೇಷವಾಗಿ ಆಚರಿಸಿದರು.

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗಳು ತ್ರಿದೇವಿ ಪೊನ್ನಕ್ಕನ ಮೊದಲ ವರ್ಷದ ಹುಟ್ಟುಹಬ್ಬವನ್ನು ಖಾಸಗಿ ಹೋಟೇಲ್ನಲ್ಲಿ ಅದ್ದೂರಿಯಶಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಂಡಲ್ವುಡ್ ತಾರೆಗಳು ಮತ್ತು ರಾಜಕೀಯ ಗಣ್ಯರು ಆಗಮಿಸಿದ್ದರು.
'ಬುಳ್ಳಿ’ ಸಿನಿಮಾದ ತಂಡದಿಂದ ಮುಂಗಡ ಹಣದ ಚೆಕ್
ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ 'ಬುಳ್ಳಿ’ ಸಿನಿಮಾ ತಂಡದಿಂದ ಭುವನ್ ಪೊನ್ನಣ್ಣ ಅವರಿಗೆ ಮುಂಗಡ ಹಣದ ಚೆಕ್ ಹಸ್ತಾಂತರಿಸಲಾಯಿತು. ಸದ್ಯ ಭುವನ್ 'ಹಲೋ 123’ ಚಿತ್ರದ ಅಭಿನಯದಲ್ಲಿ ತೊಡಗಿದ್ದಾರೆ.

ಹುಟ್ಟುಹಬ್ಬಕ್ಕೆ ಹಾಜರಾದ ಪ್ರಮುಖ ಅತಿಥಿಗಳು
ಖಾಸಗಿ ಹೋಟೇಲ್ನಲ್ಲಿ ಮಗಳ ಬರ್ತ್ಡೇ ಪಾರ್ಟಿ ಆಚರಿಸಿದ್ದ ಹರ್ಷಿಕಾ ಭುವನ್ ಆಹ್ವಾನಕ್ಕಾಗಿ ಸ್ಯಾಂಡಲ್ವುಡ್ ತಾರೆಗಳಾದ ರಮೇಶ್ ಅರವಿಂದ್, ಗಣೇಶ್, ಯೋಗರಾಜ್ ಭಟ್, ಕೆವಿಎನ್ ನಿರ್ಮಾಪಕ, ಜಯಮಾಲಾ, ಪ್ರಿಯಾಂಕ ಉಪೇಂದ್ರ, ಮಾಲಾಶ್ರೀ ಹಲವರು ಉಪಸ್ಥಿತರಿದ್ರು. ಇನ್ನು ರಾಜಕೀಯ ವಲಯದಿಂದ ಅಶ್ವಥ್ ನಾರಾಯಣ್, ಹ್ಯಾರಿಸ್, ರೋಷನ್ ಬೇಗ್ ಮುಂತಾದವರು ಆಗಮಿಸಿದ್ದರು.
ಮಗಳ ಆಗಮನದಿಂದ ಭುವನ್ಗೆ ಅದೃಷ್ಟ
ಮಗಳ ಆಗಮನದಿಂದ ಭುವನ್ ಪೊನ್ನಣ್ಣ ಅವರ ವೃತ್ತಿಪರ ಬದುಕಿನಲ್ಲಿ ಅದೃಷ್ಟ ಬಂದಿದ್ದು, ಸಾಲು ಸಾಲು ಸಿನಿಮಾ ಆಫರ್ಗಳು ಹೊರಬರುತ್ತಿದ್ದು, ಹೊಸ ಸಿನಿಮಾಗಳ ಘೋಷಣೆ ಮಾಡುತ್ತಿದ್ದಾರೆ.
ಇದನ್ನು ಓದಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಇದನ್ನು ನೋಡಿ : ನಟ ಭುವನ್ ಪೊನ್ನಣ್ಣ ಲಕ್ ಬದಲಿಸಿದ ಮಗಳು ತ್ರಿದೇವಿ ಪೊನ್ನಕ್ಕ




