Women’s ODI World Cup Final 2025 : ಮಹಿಳಾ ಏಕದಿನ ವಿಶ್ವಕಪ್ನ 13ನೇ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ಮಹಿಳಾ ಏಕದಿನ ವಿಶ್ವಕಪ್ನ 13ನೇ ಫೈನಲ್ ಪಂದ್ಯಕ್ಕಾಗಿ ವೇದಿಕೆ ಸಿದ್ಧವಾಗಿದೆ. ಇಂದು (ನವೆಂಬರ್ 2) ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಚಾಂಪಿಯನ್ ಪಟ್ಟದ ಹೊಸ ಇತಿಹಾಸದ ಹುಡುಕಾಟ
ಈ ಪಂದ್ಯದಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸೌತ್ ಆಫ್ರಿಕಾ ತಂಡವು ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಆಡುತ್ತಿದೆ. ಇತ್ತ ಭಾರತ ತಂಡವು ಈಗಾಗಲೇ ಎರಡು ಬಾರಿ ಫೈನಲ್ ತಲುಪಿದ್ದರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಹೀಗಾಗಿ ಇಂದಿನ ಫೈನಲ್ನಲ್ಲಿ ಗೆಲ್ಲುವ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಕಿರೀಟ ಅಲಂಕರಿಸಲಿದೆ.
ಅಂಕಿಅಂಶಗಳಲ್ಲಿ ಟೀಮ್ ಇಂಡಿಯಾ ಮೇಲುಗೈ
ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 34 ಬಾರಿ ಮುಖಾಮುಖಿಯಾಗಿವೆ.
- ಭಾರತ 20 ಪಂದ್ಯಗಳಲ್ಲಿ ಜಯ ಸಾಧಿಸಿದೆ.
- ಸೌತ್ ಆಫ್ರಿಕಾ 13 ಪಂದ್ಯಗಳಲ್ಲಿ ಗೆದ್ದಿದೆ.
- ಒಂದು ಪಂದ್ಯವು ರದ್ದಾಗಿದೆ.
ಇದನ್ನು ಓದಿ : ನಾಲೆ ನೀರಲ್ಲಿ ಕೊಚ್ಚಿ ಹೋದ ನಾಲ್ವರು ಮಕ್ಕಳು

ಅಂಕಿಅಂಶಗಳ ಪ್ರಕಾರ ಟೀಮ್ ಇಂಡಿಯಾ ಸ್ಪಷ್ಟ ಮೇಲುಗೈ ಹೊಂದಿದ್ದರೂ, ಸೌತ್ ಆಫ್ರಿಕಾ ತಂಡದಿಂದ ಗಟ್ಟಿ ಪೈಪೋಟಿ ನಿರೀಕ್ಷಿಸಲಾಗಿದೆ.
ಲೀಗ್ ಹಂತದ ಸೋಲಿನ ರಿವೇಂಜ್ಗಾಗಿ ಭಾರತ ಸಜ್ಜು
ಈ ಬಾರಿಯ ವಿಶ್ವಕಪ್ನ ಲೀಗ್ ಹಂತದಲ್ಲಿ ಸೌತ್ ಆಫ್ರಿಕಾ ತಂಡವು ಭಾರತವನ್ನು 3 ವಿಕೆಟ್ಗಳಿಂದ ಸೋಲಿಸಿತ್ತು. ಹೀಗಾಗಿ ಇಂದಿನ ಫೈನಲ್ನಲ್ಲಿ ಟೀಮ್ ಇಂಡಿಯಾ ಆ ಸೋಲಿನ ಪ್ರತೀಕಾರ ತೀರಿಸಲು ಬಯಸುತ್ತಿದೆ.
ಯಾರು ಹೊಸ ಚಾಂಪಿಯನ್ ಆಗುತ್ತಾರೆ?
ಇಂದಿನ ಮಹಾ ಹಣಾಹಣಿಯಲ್ಲಿ ಜಯಿಸುವ ತಂಡ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತಾಗಲಿದೆ. ಭಾರತ ತನ್ನ ಮೊದಲ ವಿಶ್ವಕಪ್ ಗೆಲುವಿಗಾಗಿ, ಸೌತ್ ಆಫ್ರಿಕಾ ತನ್ನ ಕನಸಿನ ಪ್ರಶಸ್ತಿಗಾಗಿ ಮೈದಾನಕ್ಕಿಳಿಯುತ್ತಿದೆ. ಇನ್ನು ಯಾರು ಈ ಬಾರಿ ಕಪ್ ಎತ್ತುತ್ತಾರೆ ಎಂಬುದನ್ನು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾದು ನೋಡುತ್ತಿದ್ದಾರೆ.

ಇದನ್ನು ನೋಡಿ : ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣ




