Murder : ಮದುವೆ ಆಗು ಎಂದಿದ್ದಕ್ಕೆ ಮಹಿಳೆಗೆ ಎಂಟು ಬಾರಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Murder : ಬೆಂಗಳೂರು ನಗರದಲ್ಲಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮದುವೆ ಆಗು ಎಂದು ಒತ್ತಾಯಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬಳನ್ನು ಎಂಟು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಮೃತರನ್ನು ರೇಣುಕಾ ಎಂದು ಗುರುತು
ಹತ್ಯೆಗೀಡಾದ ಮಹಿಳೆ ರೇಣುಕಾ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 31ರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಕುಟ್ಟಿ ಬಂಧನ
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಸ್ಥಳೀಯವಾಗಿ ಬ್ಯಾನರ್ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಪ್ರೀತಿಯ ನಾಟಕಕ್ಕೆ ಭೀಕರ ಅಂತ್ಯ
ರೇಣುಕಾಗೆ ಮೊದಲು ಮದುವೆಯಾಗಿತ್ತು. ಪತಿಯಿಂದ ದೂರವಾಗಿದ್ದ ಆಕೆ ಒಂದು ಮಗುವಿನೊಂದಿಗೆ ಬದುಕು ಕಟ್ಟಿಕೊಂಡಿದ್ದಳು. ಅದೇ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿಯೊಂದಿಗೆ ಪರಿಚಯ ಬೆಳೆದಿದ್ದು, ನಂತರ ಅದು ಪ್ರೀತಿಗೆ ತಿರುಗಿತ್ತು.
ಇದನ್ನು ಓದಿ : ಕಾರು-ಆಟೋ ನಡುವೆ ಅಪಘಾತ – ನಾಲ್ಕೂವರೆ ವರ್ಷದ ಕಂದಮ್ಮ ಸಾವು
ಮದುವೆಯ ಒತ್ತಾಯವೇ ಹತ್ಯೆಗೆ ಕಾರಣ
ರೇಣುಕಾ ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೋಪಗೊಂಡ ಕುಟ್ಟಿ, “ನಿನ್ನ ಜೊತೆ ಮಾತನಾಡಬೇಕಿದೆ” ಎಂದು ಕರೆದು, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆಯ ಬಳಿ ಚಾಕುವಿನಿಂದ ಎಂಟು ಬಾರಿ ಇರಿದಿದ್ದಾನೆ.
ಚಿಕಿತ್ಸೆ ಫಲಿಸದೆ ಸಾವು
ಇನ್ನು ಗಂಭೀರವಾಗಿ ಗಾಯಗೊಂಡ ರೇಣುಕಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ರೇಣುಕಾ ಮೃತಪಟ್ಟಿದ್ದಾಳೆ.
ಪೊಲೀಸ್ ತನಿಖೆ ಮುಂದುವರಿಕೆ
ಇನ್ನು ಈ ಬಗ್ಗೆ ಕೆ.ಜಿ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕುಟ್ಟಿಯನ್ನು ಬಂಧಿಸಿದ್ದಾರೆ. ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ವಿವರಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಪಾವಗಡದಲ್ಲಿ ಕನ್ನಡ ಮಾತೆಗೆ ಅವಮಾನ




