Chikkanayakanahalli : ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

Chikkanayakanahalli : ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಗ್ತಿದ್ದು, ಇತ್ತ ಚಿಕ್ಕನಾಯಕನಹಳ್ಳಿಯ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನ ಭಕ್ತಿಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯ್ತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು
ಇನ್ನು ಕನ್ನಡ ಧ್ವಜಾರೋಹಣ ನೆರವೇರಿಸಿ, ಸಾಂಸ್ಕೃತಿಕ ಮೆರವಣಿಗೆ, ರ್ಯಾಲಿ ಹಾಗೂ ಕನ್ನಡನಾಡಿನ ಇತಿಹಾಸದ ಪ್ರದರ್ಶನಗಳ ಮೆರವಣಿಗೆ ನಡೆದವು. ಅಲ್ದೇ ವಿವಿಧ ಶಾಲಾ ಮಕ್ಕಳಿಂದ ರಾಜ್ಯೋತ್ಸವ ಪ್ರಯುಕ್ತ ನೃತ್ಯ, ಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಂಭತ್ತು ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯ್ತು.
ಇದನ್ನು ಓದಿ : ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಯಶ್

ಯುವ ಪೀಳಿಗೆ ಕನ್ನಡದ ಗೌರವ ಪರಂಪರೆಯನ್ನ ಉಳಿಸಿಕೊಳ್ಳಬೇಕು
ಈ ವೇಳೆ ಶಾಸಕ ಸುರೇಶ್ ಬಾಬು ಮಾತನಾಡಿ, ಕನ್ನಡಿಗರ ಏಕತೆ, ಸಂಸ್ಕೃತಿ ಮತ್ತು ರಾಜ್ಯಾಭಿಮಾನವನ್ನ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ, ಹೀಗಾಗಿ ಯುವ ಪೀಳಿಗೆ ಕನ್ನಡದ ಗೌರವ ಮತ್ತು ಪರಂಪರೆಯನ್ನ ಉಳಿಸಿಕೊಳ್ಳಲು ಮುಂದಾಗಬೇಕು ಎಂದ್ರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿ
ಇನ್ನು ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಬಾಬು, ತಹಶೀಲ್ದಾರ್ ಪುರಂದರ, ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ರು.

ಇದನ್ನು ನೋಡಿ : ಪದವೀಧರ ಕ್ಷೇತ್ರದ ಚುನಾವಣೆ ಹಿನ್ನಲೆ ಡಿಸಿ ಶುಭಕಲ್ಯಾಣ್ ಏನೇಳಿದ್ರು ನೋಡಿ




