India vs Australia Match : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಮೊದಲ ಪಂದ್ಯವು ಮಳೆಗೆ ಆಹುತಿಯಾಗಿತ್ತು.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭಾರೀ ಸೋಲು ಕಂಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಭಾರತ ಬ್ಯಾಟಿಂಗ್ಗೆ ಬಿಗ್ ಶಾಕ್ ನೀಡಿತು.
ಆರಂಭಿಕ ಬ್ಯಾಟಿಂಗ್ ವಿಫಲ
ಭಾರತ 2.4 ಓವರ್ನಲ್ಲಿ 20 ರನ್ಗೆ ಮ್ಯಾಥ್ಯೂ ಗಿಲ್ ಮೊದಲ ವಿಕೆಟ್ ಕಳೆದುಕೊಂಡರು. ಗಿಲ್ 5 ರನ್ಗೆ ಔಟ್ ಆಗಿದ್ದರು. ನಂತರ ವಿಕೆಟ್ಕೀಪರ್ ಸ್ಯಾಮ್ಸನ್ ಕೂಡ 2 ರನ್ಗಳಲ್ಲೇ ಪೆವಿಲಿಯನ್ಗೆ ಹೋದರು. ಕ್ಯಾಪ್ಟನ್ ಸೂರ್ಯ್ 1 ರನ್ಗೆ ಔಟ್. ತಿಲಕ್ ವರ್ಮಾ, ಕುಲ್ದೀಪ್ ಯಾದವ್ ಮತ್ತು ಬುಮ್ರಾ ಖಾತೆ ತೆರೆಯದೆ ಹೋದರು.
ಇದನ್ನು ಓದಿ : ದೀಪಿಕಾ ಜತೆ ನಟಿಸಲು ಉತ್ಸುಕನಾಗಿದ್ದೇನೆ ಎಂದ ಕಿಂಗ್ ಖಾನ್
ಶರ್ಮಾ–ರಾಣಾ ತಂಡಕ್ಕೆ ಸೊಗಸಿನ ರನ್ಗಳು
ಅಭಿಷೇಕ್ ಶರ್ಮಾ ಜವಾಬ್ದಾರಿತನದಿಂದ 68 ರನ್ಗಳಿಸಿದರು. 183.78 ಸ್ಟ್ರೈಕ್ರೇಟ್ನಲ್ಲಿ 2 ಸಿಕ್ಸರ್, 8 ಬೌಂಡರಿಗಳೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಹರ್ಷಿತ್ ರಾಣಾ 33 ಬಾಲ್ಗಳಲ್ಲಿ 35 ರನ್ ನೀಡಿ ತಂಡಕ್ಕೆ ಸಾಥ್ ಕೊಟ್ಟರು. 18.4 ಓವರ್ಗಳಲ್ಲಿ ಭಾರತ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 125 ರನ್ಗಳಿಸಿತು.
ಆಸ್ಟ್ರೇಲಿಯಾ ಸುಲಭ ಗೆಲುವು
126 ರನ್ಗಳ ಗುರಿಯನ್ನ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು ನಿಗಧಿತ ಗುರಿ ಮುಟ್ಟಿತು. ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ 46, ಟ್ರಾವಿಸ್ ಹೆಡ್ 28, ಜೋಶ್ ಇಂಗ್ಲಿಷ್ 20 ರನ್ಗಳಿಸಿದರು. ಭಾರತದ ಪರ ಬುಮ್ರಾ, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು.
ಭಾರತ ಆರಂಭಿಕ ಬ್ಯಾಟಿಂಗ್ನಲ್ಲಿ ತೀವ್ರ ಹಿನ್ನಡೆ ಕಂಡರೂ, ಶರ್ಮಾ–ರಾಣಾ ಜೋಡಿ ತಂಡಕ್ಕೆ ಕೆಲವು ರನ್ಗಳನ್ನು ತಂದರು. ಆದರೆ ಆಸ್ಟ್ರೇಲಿಯಾ ತಂಡ ಸುಲಭ ಗೆಲುವು ಸಾಧಿಸಿತು.
ಇದನ್ನು ನೋಡಿ : ಮೊದಲ ಪಂದ್ಯ ಮಳೆಗೆ ಗೋವಿಂದ.. ಎರಡನೇ ಮ್ಯಾಚ್ ಹೀನಾಯವಾಗಿ ಸೋತ ಸೂರ್ಯ ಪಡೆ..!




