Breaking News : ಸಾಂಡಲ್ವುಡ್ನ ಜನಪ್ರಿಯ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಹೆಸರುಗಳು ಮತ್ತೆ ಟ್ರೆಂಡ್ ಆಗಿವೆ. ಇಬ್ಬರ ಹಳೆಯ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

Breaking News : ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ದರ್ಶನ್–ಪವಿತ್ರಾ ಗೌಡ ಜೋಡಿ
ಸಾಂಡಲ್ವುಡ್ನ ಜನಪ್ರಿಯ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಹೆಸರುಗಳು ಮತ್ತೆ ಟ್ರೆಂಡ್ ಆಗಿವೆ.
ಇಬ್ಬರ ಹಳೆಯ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
10 ವರ್ಷಗಳ ಹಿಂದಿನ ಫೋಟೋ ವೈರಲ್
ಸದ್ಯ “ದರ್ಶನ್ ಪವಿತ್ರ ಮ್ಯಾರೇಜ್ ಫೋಟೋಸ್” ಎಂಬ ಶೀರ್ಷಿಕೆಯಲ್ಲಿ ಒಂದು ರೀಲ್ ವಿಡಿಯೋ ವೈರಲ್ ಆಗುತ್ತಿದೆ. ಆ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪವಿತ್ರಾ ಕತ್ತಲ್ಲಿ ಅರಿಷಿಣದ ದಾರ ಧರಿಸಿರುವುದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿಸಿದೆ — “ಇವರು ನಿಜವಾಗಿಯೂ ಮದುವೆಯಾಗಿದ್ದಾರಾ?”
ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಅಥವಾ ಸಾಕ್ಷ್ಯ ಸಿಕ್ಕಿಲ್ಲ. ಇದು ಹಳೆಯ ಕಾರ್ಯಕ್ರಮದ ಅಥವಾ ಚಿತ್ರೀಕರಣದ ಸಂದರ್ಭದಲ್ಲಿಯ ಫೋಟೋ ಆಗಿರಬಹುದು ಎನ್ನಲಾಗಿದೆ.
MUST READ : Karnataka Political : ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಬಗ್ಗೆ ವ್ಯಂಗ್ಯ: BJP ಪೋಸ್ಟ್ನಲ್ಲಿ ಏನಿದೆ?

ದರ್ಶನ್–ಪವಿತ್ರಾ ಒಟ್ಟಿಗೆ ವಾಸವಿದ್ದರು ಎಂಬ ವರದಿಗಳು
ಕಳೆದ ಕೆಲ ವರ್ಷಗಳಿಂದ ದರ್ಶನ್ ಮತ್ತು ಪವಿತ್ರಾ ಒಟ್ಟಿಗೆ ವಾಸವಿದ್ದರು ಎಂಬ ಸುದ್ದಿ ಹಲವಾರು ಬಾರಿ ಹೊರಬಿದ್ದಿದೆ. ಅದೇ ಹಿನ್ನೆಲೆಯಲ್ಲಿ ಈ ವೈರಲ್ ಫೋಟೋಗಳು ಮತ್ತೆ ಚರ್ಚೆಗೆ ಕಾರಣವಾಗಿವೆ.
ಹತ್ತು ವರ್ಷಗಳ ಹಿಂದೆ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಪೆಟ್ಟಾದ ಸಂದರ್ಭ, ಪವಿತ್ರಾ ಅವರೇ ಅವರಿಗೆ ಊಟ ಮಾಡಿದ್ದರಂತೆ ಎಂಬ ಘಟನೆ ಅಭಿಮಾನಿಗಳ ಮನದಲ್ಲಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಪ್ರತಿಕ್ರಿಯೆ
ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಅಭಿಪ್ರಾಯಗಳು ಹರಿದು ಬರುತ್ತಿವೆ.
ಕೆಲವರು “ಮದುವೆ ಆಗಿದ್ದರೆ ಏನು ತಪ್ಪು?” ಎಂದು ಹೇಳುತ್ತಿದ್ದರೆ, ಇತರರು “ಇದು ಕೇವಲ ಹಳೆಯ ಫೋಟೋ, ಚಿತ್ರೀಕರಣದ ಸಂದರ್ಭದಂತಿದೆ” ಎಂದು ಹೇಳುತ್ತಿದ್ದಾರೆ.
MUST WATCH : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಅಲರ್ಟ್ ಶುದ್ಧ ಕುಡಿಯುವ ನೀರಿನ ಘಟಕ್ಕೆ ಸಿಕ್ತು ಮುಕ್ತಿ | GUBBI IMPACT STORY|




