Kantara 1 : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಟಿಕೆಟ್ ದರಗಳನ್ನು ಗಣನೀಯವಾಗಿ ಇಳಿಸಿದೆ.

ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಕಿಂಗ್ ಎನಿಸಿಕೊಂಡಿದೆ.
ಅಕ್ಟೋಬರ್ 2ರಂದು ತೆರೆಕಂಡ ಈ ಚಿತ್ರ ಬರೀ ಕರ್ನಾಟಕದಲ್ಲಿಯೇ 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಲ್ಲದೆ ಜಾಗತಿಕವಾಗಿ 850 ಕೋಟಿ ರೂ. ದೋಚಿಕೊಂಡಿದೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಹೊಂಬಾಳೆ ಫಿಲ್ಮ್ಸ್ ಟಿಕೆಟ್ ದರದಲ್ಲಿ ದೊಡ್ಡ ರಿಯಾಯಿತಿ ಘೋಷಿಸಿದೆ.
ಅಕ್ಟೋಬರ್ 31ರಿಂದ —
* ಸಿಂಗಲ್ ಸ್ಕ್ರೀನ್ ಟಿಕೆಟ್ ದರ: ₹99
* ಮಲ್ಟಿಪ್ಲೆಕ್ಸ್ ಟಿಕೆಟ್ ದರ: ₹150
ಇಂಗ್ಲಿಷ್ ಮತ್ತು ಸ್ಪಾನಿಷ್ ಆವೃತ್ತಿಗಳು ಅಕ್ಟೋಬರ್ 31ರಂದು
ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸದ್ದು ಮಾಡಿದ ‘ಕಾಂತಾರ ಚಾಪ್ಟರ್ 1’ ಈಗ ಜಾಗತಿಕ ಪ್ರೇಕ್ಷಕರತ್ತ ಮುಖ ಮಾಡುತ್ತಿದೆ. ಚಿತ್ರದ ಇಂಗ್ಲಿಷ್ ಮತ್ತು ಸ್ಪಾನಿಷ್ ಆವೃತ್ತಿಗಳು ಅಕ್ಟೋಬರ್ 31ರಂದು ಬಿಡುಗಡೆಯಾಗುತ್ತಿದ್ದು, ತುಳುನಾಡ ಸಂಸ್ಕೃತಿ ಮತ್ತು ದೇಸಿ ಆಚಾರ-ವಿಚಾರಗಳನ್ನು ವಿಶ್ವದ ಮುಂದೆ ತರಲಿದೆ.
ಇದನ್ನು ಓದಿ : ಅಶ್ವಿನಿ ಗೌಡ ತಾಕತ್ತಿಗೆ ಸಿಂಗಲ್ ಸಿಂಹ ಗಿಲ್ಲಿ ಸವಾಲ್
1 ಸಾವಿರ ಕೋಟಿ ಕ್ಲಬ್ಗೆ ಹೆಜ್ಜೆ ಇಡುತ್ತಿರುವ ‘ಕಾಂತಾರ ಚಾಪ್ಟರ್ 1’
ಪ್ರಸ್ತುತ 850 ಕೋಟಿ ರೂ. ಮೀರಿದ ಕಲೆಕ್ಷನ್ ದಾಖಲಿಸಿರುವ ಈ ಚಿತ್ರವು, ಇಂಗ್ಲಿಷ್ ಮತ್ತು ಸ್ಪಾನಿಷ್ ಆವೃತ್ತಿಗಳ ಬಿಡುಗಡೆಯ ನಂತರ ₹1,000 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ.
ಒಟಿಟಿ ಬಿಡುಗಡೆ ಅಕ್ಟೋಬರ್ 31ರಂದು
ಇನ್ನು ಚಿತ್ರದ ಒಟಿಟಿ ಪ್ರೀಮಿಯರ್ ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್ ವಿಡಿಯೊಯಲ್ಲಿ ನಡೆಯಲಿದೆ. ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದು.
ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಹೊಸ ಜೋಡಿ
ಈ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಜಯರಾಮ್, ಗುಲ್ಸನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಪ್ರೇಕ್ಷಕರ ಮನಗೆದ್ದಿದ್ದಾರೆ.
ಇದನ್ನು ನೋಡಿ : ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್ನಿಂದ ಭರ್ಜರಿ ಆಫರ್




