BBK : ಬಿಗ್ ಬಾಸ್ ಕನ್ನಡ ಸೀಸನ್ 12ರ ನಿನ್ನೆ ಎಪಿಸೋಡ್ನಲ್ಲಿ ಡೊಡ್ಡ ಡ್ರಾಮವೇ ನಡೆದು ಹೋಯಿತು. ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದ ನೀಲಿ ತಂಡ- ಕೆಂಪು ತಂಡ ನಡುವಣ ಟಾಸ್ಕ್ನಲ್ಲಿ ಅಂತಿಮವಾಗಿ ಕೆಂಪು ತಂಡ ಜಯ ಸಾಧಿಸಿತು.

ಬಿಗ್ ಬಾಸ್ ಕನ್ನಡ ಸೀಸನ್ 12ರ ನಿನ್ನೆದಿನದ ಎಪಿಸೋಡಿನಲ್ಲಿ ದೊಡ್ಡ ಡ್ರಾಮಾ ನಡೆಯಿತು. ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದ ನೀಲಿ ತಂಡ ಮತ್ತು ಕೆಂಪು ತಂಡಗಳ ನಡುವಿನ ಟಾಸ್ಕ್ನಲ್ಲಿ ಅಂತಿಮವಾಗಿ ಕೆಂಪು ತಂಡ ಗೆಲುವು ಸಾಧಿಸಿದೆ.
ಟಾಸ್ಕ್ ಗೆದ್ದ ನಂತರ, ತಂಡದಿಂದ ಒಬ್ಬರನ್ನು ಸ್ಟೂಡೆಂಟ್ ಆಫ್ ದಿ ವೀಕ್ ಆಗಿ ಆಯ್ಕೆ ಮಾಡಲು ಬಿಗ್ ಬಾಸ್ ಸೂಚಿಸಿದರು. ಕೆಂಪು ತಂಡದ ಸದಸ್ಯರು ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಧನುಷ್, ರಾಶಿಕಾ ಹಾಗೂ ಮಾಲು ರಾಶಿಕಾ ಹೆಸರನ್ನು ಸೂಚಿಸಿದರು. ಆದರೆ ಗಿಲ್ಲಿ ಮತ್ತು ಸ್ಪಂದನಾ ತಮ್ಮ ಹೆಸರನ್ನೇ ತೆಗೆದುಕೊಂಡಿದ್ದಾರೆ..
ಒಮ್ಮತದ ನಿರ್ಧಾರ ಕೈಗೊಳ್ಳದ ಕಾರಣ, ಬಿಗ್ ಬಾಸ್ ಈ ಸೀಸನ್ನ ಸ್ಟೂಡೆಂಟ್ ಆಫ್ ದಿ ವೀಕ್ ಅವಕಾಶವನ್ನು ಕೆಂಪು ತಂಡದಿಂದ ರದ್ದುಗೊಳಿಸಿದರು. ಇದರ ಪರಿಣಾಮವಾಗಿ ಅಶ್ವಿನಿ ಹಾಗೂ ಗಿಲ್ಲಿ ನಡುವಿನ ಒಡನಾಟ ಜಟಾಪಟಿಯಾಗಿ ಮಾರ್ಪಟ್ಟಿದೆ.
ಇದನ್ನು ನೋಡಿ : ಗುಬ್ಬಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಕೇಸ್ ಮುಚ್ಚಿಹಾಕಲು ಷಡ್ಯಂತ್ರ
ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ ಈ ಸಂಘರ್ಷ ಮತ್ತಷ್ಟು ಎದ್ದು ಕಾಣುತ್ತಿದೆ. ಮನೆಯ ಕ್ಯಾಪ್ಟನ್ ರಘು ಕೇಳಿದ “ನಿಮ್ಮ ಪ್ರಕಾರ ಡೇರಿಂಗ್ ಎಂದರೇನು?” ಎಂಬ ಪ್ರಶ್ನೆಗೆ ಗಿಲ್ಲಿ ಉತ್ತರಿಸಿದ್ದಾರೆ.
ಒಂದು ಟೀಮ್ನಲ್ಲಿ ಎಂಟು ಜನ ಇರುತ್ತಾರೆ ಸರ್, ಅದರಲ್ಲಿ ಏಳು ಜನ ಒಬ್ಬರ ಹೆಸರನ್ನು ಹೇಳ್ತಾರೆ. ಆದರೆ ಒಬ್ಬ ಸಿಂಗಲ್ ಸಿಂಹ ‘ನನಗೆ ಬೇಕು’ ಅಂತ ನಿಂತುಕೊಳ್ಳ್ತಾನೆ — ಅದೇ ಡೇರಿಂಗ್ ಸರ್! ಎಂದರು.
ಅತ್ತ ಅಶ್ವಿನಿ ಗೌಡ ಬಳಿ ಕೇಳಿದಾಗ, ನನ್ನ ಪ್ರಕಾರ ಅಶ್ವಿನಿ ಗೌಡ ಅಂದ್ರೆ ತಾಕತ್ತು.. ತಾಕತ್ತು ಅಂದ್ರೆ ಅಶ್ವಿನಿ ಗೌಡ ಎಂದು ಹೇಳಿದರು. ಹೀಗೆ ಹೇಳುತ್ತಿದ್ದಂತೆ ಗಿಲ್ಲಿ ಕ್ಯಾಪ್ಟನ್ ಬಳಿ ಬಂದು ನನ್ಗೆ ಇದನ್ನೆಲ್ಲ ನೋಡೋಕೆ ಆಗ್ತಾ ಇಲ್ಲ ಅಂತ ನನ್ನ ಡಿಬಾರ್ ಮಾಡಿ ಸರ್ ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಅಶ್ವಿನಿ, ನಾವು ಹೋರಾಟ ಅಂತ ಬಂದಾಗ ನಮ್ಮನ್ನ ಬಕೆಟ್ ಅಂತ ಕರೆದಿದ್ದಾರೆ.. ಸೌಟು ಅಂತ ಕರೆದಿದ್ದಾರೆ. ಇನ್ನೊಂದು ಅಂತ ಬಹಳ ಕೀಳು ಮಟ್ಟದಲ್ಲಿ ಮಾತನಾಡಬಹುದು ಆದ್ರೆ ಎಲ್ಲವನ್ನೂ ಎದುರಿಸಿ ನಿಂತಿರುವುದು ನನ್ನ ತಾಕತ್ತು ಸರ್ ಎಂದು ಹೇಳಿದ್ದಾರೆ.
ಇದನ್ನು ಓದಿ : ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – 20ಕ್ಕೂ ಹೆಚ್ಚು ಮಂದಿಗೆ ಗಾಯ




