Suryakumar Yadav : ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 150 ಸಿಕ್ಸರ್ಗಳ ಎಲೈಟ್ ಪಟ್ಟಿ ಸೇರಿದ್ದಾರೆ.

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ (IND vs AUS) ಮೊದಲ ಟಿ20 ಪಂದ್ಯದಲ್ಲಿ ಎರಡು ಭರ್ಜರಿ ಸಿಕ್ಸರ್ ಬಾರಿಸಿ, 150 ಸಿಕ್ಸರ್ಗಳ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ.
ವಿಶ್ವದ 5ನೇ ಹಾಗೂ ಭಾರತದ 2ನೇ ಬ್ಯಾಟ್ಸ್ಮನ್
ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ ವಿಶ್ವದ ಐದನೇ ಹಾಗೂ ಭಾರತದ ಎರಡನೇ ಕ್ರಿಕೆಟಿಗರಾಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಸಿಕ್ಸರ್ ಬಾರಿಸುವಲ್ಲಿ ಅವರು ತಮ್ಮ ಹೆಸರು ಚರಿತ್ರೆಯಲ್ಲಿ ಬರೆದಿದ್ದಾರೆ.
ಇದನ್ನು ಓದಿ : ಟಾಕ್ಸಿಕ್ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸಾಕ್ಷಿ ಸಮೇತ ಸಿಕ್ತು ಉತ್ತರ

ರೋಹಿತ್ ಶರ್ಮಾ ದಾಖಲೆ ಮುರಿಯಲು ಸೂರ್ಯ ಎದುರು
ಈ ವಿಭಾಗದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿರುವ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ರೋಹಿತ್ ಒಟ್ಟು 205 ಸಿಕ್ಸರ್ ಬಾರಿಸಿದ್ದಾರೆ. ಈ ದಾಖಲೆ ಮುರಿಯಲು ಸೂರ್ಯಕುಮಾರ್ಗೆ ಇನ್ನೂ 56 ಸಿಕ್ಸರ್ಗಳ ಅಗತ್ಯವಿದೆ. ರೋಹಿತ್ ನಿವೃತ್ತಿ ಘೋಷಿಸಿರುವ ಹಿನ್ನೆಲೆ, ಸೂರ್ಯ ಅವರಿಗೆ ಅದನ್ನು ಮೀರಿ ಹೊಸ ದಾಖಲೆ ಸೃಷ್ಟಿಸುವ ಅವಕಾಶವಿದೆ.
ಮಳೆಯಿಂದ ಪಂದ್ಯ ಸ್ಥಗಿತ
ಮನುಕಾ ಓವಲ್ ಸ್ಟೇಡಿಯಂ, ಕ್ಯಾನ್ಬೆರಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. 9.4 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 97 ರನ್ಗಳನ್ನು ದಾಖಲಿಸಿತು. ಸದ್ಯಕ್ಕೆ ಮಳೆಯಿಂದ ಪಂದ್ಯ ಸ್ಥಗಿತ ಗೊಂಡಿದೆ. ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ 39 ರನ್, ಮತ್ತು ಶುಭಮನ್ ಗಿಲ್ 37 ರನ್ ಗಳಿಸಿದ್ದಾರೆ.

ಇದನ್ನು ನೋಡಿ : ರೋಹಿತ್ ಶರ್ಮ ಜತೆ ಎಲೈಟ್ ಪಟ್ಟಿ ಸೇರಿದ ಸೂರ್ಯಕುಮಾರ್




