Rohit Sharma : ಐಸಿಸಿ ಒಡಿಐ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಐಸಿಸಿ ಒಡಿಐ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. 38 ವರ್ಷ 182 ದಿನಗಳ ವಯಸ್ಸಿನ ರೋಹಿತ್ ಶರ್ಮಾ, ಒಡಿಐ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ವಿಶ್ವದ ಅತ್ಯಂತ ಹಿರಿಯ ಬ್ಯಾಟ್ಸ್ಮನ್ ಆಗಿದ್ದಾರೆ.
ಶುಭಮನ್ ಗಿಲ್ನ ಹಿಂದಿಕ್ಕಿದ ರೋಹಿತ್
ಇದು ರೋಹಿತ್ ಶರ್ಮಾ ಅವರ ಕಾರಕಿ ಮೊದಲ ಬಾರಿಗೆ ಐಸಿಸಿ ಒಡಿಐ ಶ್ರೇಯಾಂಕದ ಅಗ್ರ ಸ್ಥಾನ. ಹಾಲಿ ನಾಯಕ ಶುಭಮನ್ ಗಿಲ್ ಅವರನ್ನು ಅವರು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ 781 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನದ ಇಬ್ರಾಹಿಂ ಝರ್ಡಾನ್ 764 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಗಿಲ್ 745 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಅದ್ಭುತ ಪ್ರದರ್ಶನ
ಇನ್ನು ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಅಂತ್ಯಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು.
- ಎರಡನೇ ಪಂದ್ಯದಲ್ಲಿ ಅರ್ಧಶತಕ
- ಮೂರನೇ ಪಂದ್ಯದಲ್ಲಿ ಶತಕ
ಇದನ್ನು ಓದಿ : ರಕ್ಷಿತಾ ಶೆಟ್ಟಿಯನ್ನು ಮತ್ತೆ ಟಾರ್ಗೆಟ್ ಮಾಡಿದ ಅಶ್ವಿನಿ ಗೌಡ

ಈ ಸರಣಿಯಲ್ಲಿ ಅವರು ಒಟ್ಟು 202 ರನ್ಗಳನ್ನು 101ರ ಸರಾಸರಿಯಲ್ಲಿ ಗಳಿಸಿದರು. ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅವರು ಶತಕದ ಪ್ರದರ್ಶನ ನೀಡುತ್ತಾ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಗೆದ್ದರು.
ಭಾರತ ಕೊನೆಯ ಪಂದ್ಯವನ್ನು ಗೆದ್ದರೂ, ಮೊದಲ ಎರಡು ಪಂದ್ಯಗಳಲ್ಲಿ ಸೋತ ಕಾರಣದಿಂದ ಸರಣಿ 1–2 ಅಂತರದಲ್ಲಿ ಆಸ್ಟ್ರೇಲಿಯಾದವರಿಗೆ ಕಳೆದುಕೊಳ್ಳಬೇಕಾಯಿತು.
ಇತರೆ ಭಾರತೀಯರ ಶ್ರೇಯಾಂಕ ಸ್ಥಿತಿ
- ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿ, ಮೂರನೇ ಪಂದ್ಯದಲ್ಲಿ ಅಜೇಯ 74 ರನ್ ಗಳಿಸಿ 725 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.
- ಶ್ರೇಯಸ್ ಅಯ್ಯರ್: ಗಾಯದ ಕಾರಣ ಮೂರನೇ ಪಂದ್ಯದಲ್ಲಿ ಆಡದಿದ್ದರೂ, ಶ್ರೇಯಸ್ 9ನೇ ಸ್ಥಾನಕ್ಕೇರಿದ್ದಾರೆ.
ರೋಹಿತ್ ಶರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ನೊಂದಿಗೆ ಮತ್ತೆ ವಿಶ್ವ ಕ್ರಿಕೆಟ್ನಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎನ್ನುವುದನ್ನು ತೋರಿಸಿರುವ ರೋಹಿತ್, ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ.
ಇದನ್ನು ನೋಡಿ : ಅಗ್ರ ಸ್ಥಾನಕ್ಕೇರಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ!




