
Cricketer Dunith Wellalage : ಏಷ್ಯಾಕಪ್ನಲ್ಲಿ ಶ್ರೀಲಂಕಾ ತಂಡದ ಚೊಚ್ಚಲ ಪಂದ್ಯವನ್ನಾಡಿದ 22 ವರ್ಷದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆಗೆ ಈ ಪಂದ್ಯ ಎಂದೆಂದಿಗೂ ಮರೆಯಲಾಗದ ಪಂದ್ಯವಾಗಿ ಮಾರ್ಪ ಟ್ಟಿದೆ.
ಅಫ್ಘಾನಿಸ್ತಾನದ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ, ವೆಲ್ಲಾಲಗೆ ತಮ್ಮ ಕೊನೆಯ ಓವರ್ನಲ್ಲಿ ಐದು ಸತತ ಸಿಕ್ಸರ್ಗಳನ್ನು ಚಚ್ದಚಿಸಿಕೊಂಡರು. ಇದರಿಂದ ನಿರಾಸೆಗೊಂಡಿದ್ದ ದುನಿತ್ ವೆಲ್ಲಾಲಗೆ ಪಂದ್ಯದ ನಂತರ ತಂದೆಯ ಹಠಾತ್ ಸಾವಿನ ಸುದ್ದಿಯ ಅಘಾತ ಕಾದಿತ್ತು.
ಇನ್ನು ಪಂದ್ಯದ ನಂತರ ತಂಡದ ಮ್ಯಾನೇಜರ್ ಹಾಗೂ ಕೋಚ್ ಸನತ್ ಜಯಸೂರ್ಯ ಅಘಾತಕಾರಿ ವಿಷಯವನ್ನು ದುನಿತ್ ವೆಲ್ಲಾಲಗೆ ತಿಳಿಸಿದ್ದಾರೆ. ದುಃಖಿತರಾದ ವೆಲ್ಲಲ್ಲಾಗೆ ಸಹ ಆಟಗಾರರು ಸಮಾಧಾನ ಪಡಿಸಿದ್ದಾರೆ. ವೆಲ್ಲಲ್ಲಾ ತಂದೆ ಹೃದಯಾಘಾತದಿಂದ ಮ್ಯಾಚ್ ನೋಡುತ್ತಲೇ ಮೃತಪಟ್ಟಿದ್ದಾರೆ.

ತಂದೆಯ ನಿಧನದ ಸುತ್ತಿ ತಿಳಿದ ತಕ್ಷಣ ದುನಿತ್ ವೆಲ್ಲಾಲಗೆ ತವರಿಗೆ ಮರಳಿದ್ದಾರೆ. ಅವರು ಮತ್ತೆ ಏಷ್ಯಾ ಕಪ್ನಲ್ಲಿ ತಂಡದ ಭಾಗವಾಗಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ.




