BENGALURU : ಬೆಂಗಳೂರಿನಲ್ಲಿ ಕಾರಿನ ಮಿರರ್ ಗೆ ದರ್ಶನ್ ಎಂಬಾತನ ಬೈಕ್ ತಾಗಿದ್ದಕ್ಕೆ ದಂಪತಿಗಳು ಆತನನ್ನು ಹಿಂಬಾಲಿಸಿ ಕಾರಿನಿಂದ ಗುದ್ದಿದ್ದು, ಯುವಕ ಜೀವ ಕಳೆದುಕೊಂಡಿದ್ದಾನೆ.

BENGALURU: ಬೆಂಗಳೂರು ನಗರದಲ್ಲಿ ಇತ್ತೀಚೆಗೆ ರೋಡ್ ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಕಾರಿನ ಮಿರರ್ ಬೈಕ್ಗೆ ತಾಕಿದ್ದಕ್ಕೆ ಯುವಕನ ಪ್ರಾಣವನ್ನೇ ಬಲಿ ಪಡೆದಿದ್ದಾರೆ.
ಅಕ್ಟೋಬರ್ 27ರ ರಾತ್ರಿ11.30ರ ಸುಮಾರಿಗೆ ಶ್ರೀರಾಮ ಲೇಔಟ್ ನಲ್ಲಿ ದರ್ಶನ್ ಮತ್ತು ವರುಣ್ ಎಂಬ ಇಬ್ಬರು ಯುವಕರು ಬೈಕ್ನಲ್ಲಿ ಹೋಗುತ್ತಿದ್ದಾಗ ಬೈಕ್ ಮುಂದೆ ಹೋಗುತ್ತಿದ್ದ ಕಾರಿನ ಮಿರರ್ಗೆ ತಾಕಿ ಮಿರರ್ನ ಗಾಜು ಒಡೆದಿತ್ತು. ಇದರಿಂದ ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ಎಂಬ ದಂಪತಿ, ಇಬ್ಬರನ್ನು ಸುಮಾರು ಎರಡು ಕಿಲೋಮೀಟರ್ಗಳಷ್ಟು ಹಿಂಬಾಲಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.
ಇದನ್ನೂ ಓದಿ : Bengaluru: ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳ ಆದೇಶಕ್ಕೆ ಹೈಕೋರ್ಟ್ ತಡೆ..!
ಪರಿಣಾಮ ಇಬ್ಬರು ರಸ್ತೆಗುರುಳಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ವರುಣ್ ಎಂಬಾತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲಿಗೆ ಈ ಪ್ರಕರಣವನ್ನು ಅಪಘಾತ ಎಂದು ದಾಖಲಿಸಲಾಗಿತ್ತು. ಆದರೆ ತನಿಖೆಯಲ್ಲಿ ದಂಪತಿ ಡಿಕ್ಕಿ ಹೊಡೆದು ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮರಳಿ ಬಂದು ಕಾರಿನ ಭಾಗಗಳನ್ನು ಎತ್ತಿಕೊಂಡು ದಂಪತಿ ಪರಾರಿಯಾಗಿದ್ದಾರೆ.
ಸದ್ಯ ಆರೋಪಿ ಮನೋಜ್ ಕುಮಾರ್ ಶಿಕ್ಷಕರಾಗಿದ್ದು, ಬನ್ನೇರುಘಟ್ಟ ರಸ್ತೆಯ ಬಳಿ ಅಕಾಡೆಮಿ ನಡೆಸುತ್ತಿದ್ದಾನೆ. ಪುಟ್ಟೇನಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ.
MUST WATCH : CN HALLI | ಹೆಚ್ಚಾಯ್ತು ಹೇಮೆ ಕಿಚ್ಚು ಪೂರ್ಣಗೊಳ್ಳದ ಕಾಮಗಾರಿ ವಿರುದ್ಧ ಕಿಡಿ | CN HALLI NEWS




