Mokshitha Pai : ಬಿಗ್ ಬಾಸ್ ಸ್ಟಾರ್ ಮೋಕ್ಷಿತಾ ಪೈ ಹೊಸ ಫೋಟೋಗಳು ವೈರಲ್

ಬಿಗ್ ಬಾಸ್ ಸೀಸನ್ 11 (Bigg Boss Kannada 11) ಫೈನಲಿಸ್ಟ್ ಆಗಿದ್ದ ಮೋಕ್ಷಿತಾ ಪೈ (Mokshitha Pai) ಅವರ ಹೊಸ ಬರ್ತ್ಡೇ ಫೋಟೋಸ್ (Birthday Photos) ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಣ್ಣ ಬಣ್ಣದ ಫ್ರಾಕ್ನಲ್ಲಿ ಮೋಕ್ಷಿತಾ ಪೈ ಸರಳ ಹಾಗೂ ನೈಸರ್ಗಿಕವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸರಳ ಶೈಲಿಯಲ್ಲಿ ಮಿಂಚಿದ ಮೋಕ್ಷಿತಾ
ಹೆಚ್ಚು ಆಭರಣ ಅಥವಾ ಮೇಕಪ್ ಇಲ್ಲದೇ, ತಮ್ಮ ಮುಗುಳು ನಗೆ ಮತ್ತು ನೈಸರ್ಗಿಕ ಸ್ಟೈಲ್ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫೋಟೋಶೂಟ್ನ ಪ್ರತಿಯೊಂದು ಚಿತ್ರದಲ್ಲಿಯೂ ಅವರ ನೈಸರ್ಗಿಕ ಕಿರುನಗೆ ಸ್ಪಷ್ಟವಾಗಿ ಕಾಣುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್
ಪಾರು ಧಾರಾವಾಹಿ (Paaru Serial) ಮೂಲಕ ಜನಪ್ರಿಯರಾದ ಮೋಕ್ಷಿತಾ ಪೈ ಸದಾ Instagram ಹಾಗೂ ಸೋಶಿಯಲ್ ಮೀಡಿಯಾಯಲ್ಲಿ ಸಕ್ರಿಯರಾಗಿರುತ್ತಾರೆ. ತಾವು ಉಪಯೋಗಿಸಿದ ಎಲ್ಲಾ ವಸ್ತುಗಳ ಬ್ರ್ಯಾಂಡ್ ಹಾಗೂ ವಿವರಗಳನ್ನು ಟ್ಯಾಗ್ ಮಾಡುತ್ತಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
MUST READ : Kantara Chapter 1: 765 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಚಾಪ್ಟರ್ 1..!

ಸರಳವಾಗಿ ಆಚರಿಸಿದ ಹುಟ್ಟುಹಬ್ಬ
ಅಕ್ಟೋಬರ್ 22 ರಂದು ಮೋಕ್ಷಿತಾ ಪೈ ತಮ್ಮ ಬರ್ತ್ಡೇ ಸೆಲೆಬ್ರೇಶನ್ ಅನ್ನು ಯಾವುದೇ ಆಭರಣವಿಲ್ಲದೇ, ತುಂಬಾ ಸರಳವಾಗಿ ಕುಟುಂಬದ ಜೊತೆ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದ ಅವರು, ಈ ಬಾರಿ ಮನೆಯವರ ಜೊತೆ ಶಾಂತಿಯುತವಾಗಿ ಸಂಭ್ರಮಿಸಿದ್ದಾರೆ.

ಅಭಿಮಾನಿಗಳ ಶುಭಾಶಯಗಳ ಮಳೆ
ಮೋಕ್ಷಿತಾ ಅವರ ಇತ್ತೀಚಿನ ಫೋಟೋಗಳು ಪ್ರಕಟವಾದ ತಕ್ಷಣ, ಸಾವಿರಾರು ಅಭಿಮಾನಿಗಳು ಕಮೆಂಟ್ಗಳಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. “ನೀವು ನಿಜವಾಗಿಯೂ ಸುಂದರ ಮತ್ತು ಸರಳ ವ್ಯಕ್ತಿ,” “ಮೋಕ್ಷಿತಾ, ನಿಮ್ಮ ನಗೆ ಅಮೂಲ್ಯ,” ಎಂಬಂತಹ ಕಾಮೆಂಟ್ಗಳು ನೆಟ್ಟಿಗರಿಂದ ಹರಿದು ಬರುತ್ತಿವೆ.
MUST WATCH: ಹುಳಿಯಾರಿನಲ್ಲಿ RSS ಶತಾಬ್ಧಿ ಪಥಸಂಚಲನ ಗಣವೇಷಧಾರಿಯಾಗಿ ಮಿಂಚಿದ ಸ್ವಯಂ ಸೇವಕರು




