Kannada Political : ಟನಲ್ ರೋಡ್ ಬಿಡಿ ಸ್ವಾಮಿ, ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’: ಡಿಕೆ ಶಿವಕುಮಾರ್ರನ್ನು ಟೀಕಿಸಿದ ಆರ್. ಅಶೋಕ್

Kannada Political : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಶಾಲಾ-ಕಾಲೇಜುಗಳ ಶಿಕ್ಷಕರು ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಟನಲ್ ರೋಡ್ ಬಿಡಿ ಸ್ವಾಮಿ…– ಅಶೋಕ್ ಟ್ವೀಟ್ನಲ್ಲಿ ವ್ಯಂಗ್ಯ
ಆರ್. ಅಶೋಕ್ ತಮ್ಮ ಟ್ವೀಟ್ನಲ್ಲಿ, – “ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ. ಸುರಂಗ ರಸ್ತೆ, ಸ್ಕೈ ಡೆಕ್, ಬ್ರ್ಯಾಂಡ್ ಬೆಂಗಳೂರು—all fancy ideas—but your GBA inefficiency has left teachers unpaid for months,”
ಎಂದು ಡಿಕೆ ಶಿವಕುಮಾರ್ರನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದಾರೆ.
ಅವರು ಮುಂದುವರೆದು, – “ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಸಂಸಾರ ತೂಗಿಸುತ್ತಿದ್ದಾರೆ.
ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷಕರ ಸಮಸ್ಯೆ ಬಗೆಹರಿಸಿ,”ಎಂದು ಕಟುವಾಗಿ ಟೀಕಿಸಿದ್ದಾರೆ.
MUST READ : Congress Leaders Clash: ಸಿದ್ದರಾಮಯ್ಯ ಅನಿವಾರ್ಯವೇ? ಬೆಂಬಲಿಗರೇ ಭಿನ್ನ ಧ್ವನಿ ಎತ್ತಿದ ಮಹದೇವಪ್ಪ–ರಾಜಣ್ಣ
ವೇತನ ಸಿಗದೇ ಶಿಕ್ಷಕರ ಪರದಾಟ ಮುಂದುವರಿಕೆ
ಜಿಬಿಎ ಸ್ಥಾಪನೆಯ ನಂತರ ಬಿಎಂಪಿ ವ್ಯಾಪ್ತಿಯ ಶಾಲೆಗಳ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆದಿವೆ. ಆದರೆ ಹೊಸ ತಾಂತ್ರಿಕ ಪ್ರಕ್ರಿಯೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣದಿಂದಲೇ ಶಿಕ್ಷಕರ ವೇತನ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆ ಸಿಗುತ್ತಿಲ್ಲ, ಮತ್ತು ಹಲವರಿಗೆ ಆರೋಗ್ಯ ವಿಮೆ ಸೌಲಭ್ಯ ಕೂಡ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.
ಡಿ.ಕೆ. ಶಿವಕುಮಾರ್ ಭರವಸೆ ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ
ಪಾಲಿಕೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಮತ್ತು ಅತಿಥಿ ಶಿಕ್ಷಕರಿಗೆ ನಿಗದಿತ ವೇತನ ನೀಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪೂರ್ವದಲ್ಲಿ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ನೆಲೆನಿಂತಿಲ್ಲ ಎಂಬುದು ಶಿಕ್ಷಕರ ಅಸಮಾಧಾನದ ಮೂಲವಾಗಿದೆ.
ಟನಲ್ ರೋಡ್ ಮತ್ತು ಮೆಗಾ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳ ನಡುವೆಯೇ ಶಿಕ್ಷಕರ ಸಂಬಳ ಬಾಕಿ ವಿಷಯ ಸದ್ಯ ರಾಜಕೀಯ ಚರ್ಚೆಯ ವಿಷಯವಾಗಿದೆ. ಡಿಕೆ ಶಿವಕುಮಾರ್ ಈ ಕುರಿತಾಗಿ ಏನೆಂತಹ ಕ್ರಮ ಕೈಗೊಳ್ಳುತ್ತಾರೆ ಎಂಬುದರತ್ತ ಶಿಕ್ಷಕರು ಮತ್ತು ನಾಗರಿಕರ ಗಮನ ನೆಟ್ಟಿದೆ.
ಇದನ್ನು ನೋಡಿ : ಅಂಬೇಡ್ಕರ್ ಹಾಗೂ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲ ಪೂಜೆ




