BBK 12 : ಕಿಚ್ಚ ಸುದೀಪ್ ಅವರ ನಿರ್ವಹಣೆಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 12 ಹೊಸ ತಿರುವುಗಳೊಂದಿಗೆ ಮುಂದುವರಿಯುತ್ತಿದೆ.

BBK 12 : ಕಿಚ್ಚ ಸುದೀಪ್ ಅವರ ನಿರ್ವಹಣೆಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 12 ಹೊಸ ತಿರುವುಗಳೊಂದಿಗೆ ಮುಂದುವರಿಯುತ್ತಿದೆ. ಮನೆಯಲ್ಲಿ ಕಂಟೆಸ್ಟೆಂಟ್ಗಳು ಪರಸ್ಪರ ಮಾತಿನ ಯುದ್ಧ ಮತ್ತು ಜಗಳಗಳಿಂದ ಮನೋವೈಜ್ಞಾನಿಕ ಒತ್ತಡವನ್ನು ಎದುರಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಸ್ಪರ್ಧಿಗಳ ಸಂಬಂಧಿಕರಿಗೆ ಮನೆಯ ಕ್ಯಾಪ್ಟನ್ ಫೋನ್ ಮಾಡಿದ್ದಾರೆ. ಇದಕ್ಕಾಗಿ ರಾಶಿಕಾ ಹಾಗೂ ಕ್ಯಾಪ್ಟನ್ ನಡುವೆ ಗಲಾಟೆಯೇ ನಡೆದು ಹೋಗಿದೆ. ಕ್ಯಾಪ್ಟನ್ ರಘು ಮನೆಯಲ್ಲಿ ಇರುವ ಸ್ಪರ್ಧಿಗಳ ಸಂಬಂಧಿಕರಿಗೆ ಫೋನ್ ಮಾಡಿ ಮಾತನಾಡಿದ್ದು, ಕೆಲವವರಿಗೆ ನಿರ್ಧಾರಗಳನ್ನು ತಿಳಿಸಿದ್ದಾರೆ. ಇದರಲ್ಲಿ ಧನುಷ್ ನಾಮಿನೇಟ್ ಆಗಿರುವ ವಿಷಯವು ತಾಯಿ ಜೊತೆ ಫೋನ್ನಲ್ಲಿ ಚರ್ಚೆಗೊಂಡಿದ್ದು, ಧನುಷ್ ತಮ್ಮ ತಾಯಿಯಿಂದ ಪ್ರೋತ್ಸಾಹ ಪಡೆದರೂ, ಕಣ್ಣೀರು ಹಾಕಿದ್ದಾರೆ.
ಇದನ್ನು ಓದಿ : ಸವಾರರ ಮೇಲೆ ಹರಿದ ವಾಹನ | ಇಬ್ಬರು ಯುವಕರು ಸಾವು

ರಾಶಿಕಾ ಅವರ ತಮ್ಮನಿಗೆ ಫೋನ್ ಮಾಡಿದ್ದ ಕ್ಯಾಪ್ಟನ್ ರಘು ಅವರು, ಬಿಗ್ ಬಾಸ್ನಿಂದ ರಾಶಿಕಾ ಅವರು ಲಾಸ್ಟ್ ಆಗಿದ್ದಾರೆ ಎಂದಿದ್ದಾರೆ. ಸೂರಜ್ ಮುಖದಲ್ಲಿ ಬೇಸರ ಕಾಣಿಸಿದೆ. ಫೋನ್ ಮಾಡಿ ರೂಮ್ನಿಂದ ಹೊರ ಬಂದ ರಘು ಅವರ ಜೊತೆ ರಾಶಿಕಾ ಜಗಳಕ್ಕೆ ಇಳಿದಿದ್ದಾರೆ. ನಾನು ಲಾಸ್ಟ್ ಆಗಿದ್ದಕ್ಕೆ ಕಾರಣ ಹೇಳು ಎಂದು ರಾಶಿಕಾ ಜೋರು ಜೋರಾಗಿಯೇ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಬಗ್ಗೆ ಏನು ಅನಿಸಿತೋ ಅದನ್ನೇ ನಾನು ಫೋನ್ನಲ್ಲಿ ಹೇಳಿದ್ದು, ನೀನು ಇಲ್ಲೇ ಕೂಗಿಕೊಂಡು ನಿಂತ್ಕೋ ಅಂತ ರಘು ಕಿರುಚಾಡಿದ್ದಾರೆ. ಮೊದಲು ರೀಸನ್ ಹೇಳು, ಹೋಗು ಬಾ ಅಂತ ನೀನು ಹೇಳಂಗಿಲ್ಲ. ನೀನು ಕ್ಯಾಪ್ಟನ್ ಆಗೋಕೆ ಲಾಯಕ್ಕೇ ಇಲ್ಲ ಎಂದು ರಾಶಿಕಾ ರಘು ಜೊತೆ ಜಗಳನೇ ಮಾಡಿದ್ದಾರೆ.
ಇಂದು ಬಿಗ್ಬಾಸ್ ಮನೆಯಲ್ಲಿ ಏನೆಲ್ಲಾ ಆಗಲಿದೆ ಎಂದು ತಿಳಿಯಬೇಕಾದರೆ ಎಪಿಸೋಡ್ ಮಿಸ್ ಮಾಡಲೇಬೇಡಿ.

ಇದನ್ನು ನೋಡಿ : ಗುಬ್ಬಿಯಲ್ಲಿ ತಾರಕ್ಕೇರಿದ ಟೋಲ್ ಫೈಟ್- ರೈತ ಸಂಘದಿಂದ ಬೃಹತ್ ಪ್ರತಿಭಟನೆ




