
MALE MAHADESHWARA TEMPLE HUNDI COUNTING : ಮಲೆ ಮಹದೇಶ್ವರ ಬೆಟ್ಟದ ಶ್ರೀ ಕ್ಷೇತ್ರದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಕೇವಲ 29 ದಿನಗಳಲ್ಲಿ ಭಕ್ತರಿಂದ ₹1.70 ಕೋಟಿ ಸಂಗ್ರಹವಾಗಿದೆ. ನೆನ್ನೆ ಬೆಳಗ್ಗೆ ಆರಂಭಗೊಂಡ ಎಣಿಕೆ ಕಾರ್ಯ ಸಂಜೆವರೆಗೆ ನಡೆಯಿತು.
ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ನಿಗಾವಳಿ ಮುಂದೆ ಎಣಿಕೆ ಕಾರ್ಯ ನಡೆದಿದ್ದು, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರ ಸಮ್ಮು ಖದಲ್ಲಿ ಹುಂಡಿಗಳು ತೆರೆಯಲಾಯಿತು. ಶಕ್ತಿ ಯೋಜನೆ, ರಜಾದಿನಗಳು ಹಾಗೂ ಜಾತ್ರಾ ಮಹೋತ್ಸವಗಳು ಈ ಎಲ್ಲ ಕಾರಣಗಳಿಂದ ಭಕ್ತರ ಹರಿವು ಹೆಚ್ಚಾಗಿದ್ದು, ಕಡಿಮೆ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹವಾಗಿದೆ.
30 ಗ್ರಾಂ ಚಿನ್ನ ಹಾಗೂ 1,100 ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ. ಇ ಹುಂಡಿಯಿಂದ 3,92,123 ರೂ. ಹಣ ಸಂಗ್ರಹವಾಗಿದೆ. ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 3 ನೋಟುಗಳೂ ಹುಂಡಿಯಲ್ಲಿ ಸಿಕ್ಕಿವೆ.





