
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಸಂದರ್ಭದಲ್ಲಿ ಆ್ಯಪಲ್ ಪ್ರಿಯರಿಗೆ ಭರ್ಜರಿ ಆಫರ್ ಸಿಕ್ಕಿದೆ. ಈಗಾಗಲೇ ಆ್ಯಪಲ್ ತನ್ನ ಹೊಸ ಐಫೋನ್ 17 ಸೀರೀಸ್ ಅನ್ನು ಲಾಂಚ್ ಮಾಡಿದ್ದು, ಇದರ ಹಿಂದಿನ ಮಾದರಿಗಳಾದ ಐಫೋನ್ 16 ಸೀರೀಸ್ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಸೆಪ್ಟೆಂಬರ್ 23ರಿಂದ ಆರಂಭವಾಗುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 16 ಪ್ರೊ ಬೆಲೆ 1,12,900 ರೂಪಾಯಿಯಿಂದ ನೇರವಾಗಿ 69,999 ರೂಪಾಯಿಗೆ ಇಳಿದಿದ್ದು, 42,901 ರೂಪಾಯಿ ಲಾಭ ಸಿಗಲಿದೆ. ಅದೇ ರೀತಿ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ 1,44,900 ರೂಪಾಯಿಯಿಂದ 89,999 ರೂಪಾಯಿಗೆ ಇಳಿಕೆ ಕಂಡಿದೆ. ಜೊತೆಗೆ ಐಫೋನ್ 16 ಕೇವಲ 51,999 ರೂಪಾಯಿಗೆ ಹಾಗೂ ಐಫೋನ್ 14 ಕೇವಲ 39,999 ರೂಪಾಯಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಬೆಲೆಯಲ್ಲಿ ಫ್ಲಾಟ್ ಡಿಸ್ಕೌಂಟ್ ಜೊತೆಗೆ ಬ್ಯಾಂಕ್ ಆಫರ್ಗಳು ಹಾಗೂ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದ್ದು, ಮೊದಲ ಕೆಲವು ಗಂಟೆಗಳಲ್ಲೇ ಮಾರಾಟ ಮುಕ್ತಾಯವಾಗುವ ಸಾಧ್ಯತೆ ಇದೆ.




