DK SHIVAKUMAR : ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸುವ ಕಾಂಗ್ರೆಸ್ (Congress) ಸರ್ಕಾರದಲ್ಲೀಗ ಆಂತರಿಕ ಚಟುವಟಿಕೆಗಳು ಬರೀ ನಿಗೂಢವಾಗಿವೆ. ನವೆಂಬರ್ ಕ್ರಾಂತಿ ಸಂಭವಿಸಲಿದೆಯೇ? ಎಂಬ ಚರ್ಚೆಗಳ ನಡುವೆ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದು ಭಾರೀ ಕುತೂಹಲ ಮೂಡಿಸಿದೆ.

DK SHIVAKUMAR: “ರಾಜ್ಯ ಕಾಂಗ್ರೆಸ್ನಲ್ಲಿ ಸರ್ಜರಿ ಆಗೋದು ಗ್ಯಾರಂಟಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿ ಕೊಟ್ಟಿದ್ದು, ಸಂಪುಟ ಪುನರ್ರಚನೆ, ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಕುರಿತ ಊಹಾಪೋಹಗಳು ಮತ್ತೆ ಚರ್ಚೆಯಲ್ಲಿವೆ.
ಹೌದು ಈ ಹೇಳಿಕೆ ನಡುವೆ ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದು, ಇದು ಕಾಂಗ್ರೆಸ್ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ನವೆಂಬರ್ ತಿಂಗಳಲ್ಲಿ ಹೈಕಮಾಂಡ್ ಭೇಟಿಗೆ ನೀಡಲಿದ್ದೇನೆ ಎಂದು ಕುಂದಾನಗರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ತಿಳಿಸಿದ್ದರು. ಆದರೆ ಅದಕ್ಕೂ ಮೊದಲೇ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ, ಹೈಕಮಾಂಡ್ ಭೇಟಿಗಾಗಿ ಕಾದು ಕುಳಿತ್ತಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : Gold Rate Today : ಕೊನೆಗೂ ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್- ಚಿನ್ನದ ಬೆಲೆಯಲ್ಲಿ ಇಳಿಕೆ
ಇನ್ನು ಸಂಪುಟ ಪುನಾರಚನೆ ವಿಷ್ಯ ಕಾಂಗ್ರೆಸ್ ಪಾಳಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದು, ಕೆಲ ಸಚಿವರು ತ್ಯಾಗದ ಮಾತುಗಳನ್ನಾಡ್ತಿದ್ರೆ, ಇನ್ನು ಕೆಲವರು ದೇವರ ಮೇಲೆ ಭಾರ ಹಾಕಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ನವೆಂಬರ್ ತಿಂಗಳು ಹತ್ತಿರವಾಗ್ತಿದ್ದಂತೆ, ನಡೆಯುತ್ತಿರುವ ಈ ಬೆಳವಣಿಗೆಗಳು ಪಾಲಿಟಿಕಲ್ ಸರ್ಜರಿ ಗ್ಯಾರಂಟಿ ಎನ್ನ ಲಾಗ್ತಿದೆ.
MUST WATCH : MYDALA KERE | ಕೆರೆ ಏರಿ ಸರಿಮಾಡಲು ಬಂದ GOWRI SHANKAR – ಇದು PRAJASHAKTHI TVಯ BIG IMPACT | TUMAKURU NEWS




