Pratap Simha vs Pradeep Eshwar : ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ (Pratap Simha vs Pradeep Eshwar) ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

Pratap Simha vs Pradeep Eshwar : ಚಿಕ್ಕಬಳ್ಳಾಪುರ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಪ್ರದೀಪ್ ಈಶ್ವರ್ ಪ್ರತಾಪ್ ಸಿಂಹ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ತಾಯಿಗೆ ಅವಮಾನ, ಕ್ಷಮೆ ಕೇಳಬೇಕು – ಪ್ರದೀಪ್ ಈಶ್ವರ್ ಎಚ್ಚರಿಕೆ
ಸಭೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮೈಸೂರು ಮಾಜಿ ಸಂಸದ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ. ನಮ್ಮ ತಾಯಿ ಸ್ವರ್ಗದಲ್ಲಿದ್ದಾರೆ, ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಕಾಗಿಲ್ಲ. ಮೈಸೂರಿನ ಚಾಮುಂಡಿ ತಾಯಿ ದೇವಸ್ಥಾನದಲ್ಲೇ ಹೋಗಿ ಕ್ಷಮೆ ಕೇಳು. ಇಲ್ಲ ಅಂದ್ರೆ ನಿನ್ನ ಮನೆಯಲ್ಲಿ ಸೀತಾದೇವಿ ಫೋಟೋ ಇದ್ದರೆ ಅಲ್ಲಿಯೇ ಕ್ಷಮೆ ಕೇಳು,”
ಎಂದು ಕಿಡಿ ಕಾರಿದರು.
ಅವರು ಮುಂದುವರಿಸಿ, “ನಾನು ಕ್ಷಮಿಸುವುದಿಲ್ಲ, ಆದರೆ ನಮ್ಮ ತಾಯಿ ಕ್ಷಮಿಸಬಹುದು. ನೀನು ನನ್ನ ತಾಯಿ ಬಳಿ ಕ್ಷಮೆ ಕೇಳು,” ಎಂದು ಹೇಳಿದರು.
MUST READ : Yathindra Siddaramaiah : ಕಾಂಗ್ರೆಸ್ನಲ್ಲಿ ಹೊಸ ಪೈಪೋಟಿ: ಯತೀಂದ್ರ ಹೇಳಿಕೆಗೆ ಡಿಕೆಶಿ ಬಣದ ಸೆಡ್ಡು

‘Control your tongue, Mr. Pratap Simha’ – ಪ್ರದೀಪ್ ಈಶ್ವರ್ ಎಚ್ಚರಿಕೆ
ಪ್ರದೀಪ್ ಈಶ್ವರ್ ತಮ್ಮ ಭಾಷಣದಲ್ಲಿ ಪ್ರತಾಪ್ ಸಿಂಹ ಅವರ ವರ್ತನೆ, ಆರ್ಎಸ್ಎಸ್ ನ ನಡೆ ಹಾಗೂ ಕೆಲವು ನಾಯಕರ ಬಗ್ಗೆ ತೀವ್ರವಾಗಿ ಟೀಕಿಸಿದರು.ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡ್ತೀರಾ? ಅವರ ವಯಸ್ಸು ಎಷ್ಟು ಗೊತ್ತಾ? ನಿಮ್ಮ ಭಾಷೆ ತಿದ್ದಿಕೊಳ್ಳಿ. Control your tongue, Mr. Pratap Simha,”
ಎಂದು ಎಚ್ಚರಿಕೆ ನೀಡಿದರು.
‘ಆರ್ಎಸ್ಎಸ್ ಕಲಿಸಿದದ್ದು ಇದೇನಾ?’ – ಕಟುವಾಗಿ ಪ್ರಶ್ನಿಸಿದ ಶಾಸಕ
ಪ್ರದೀಪ್ ಈಶ್ವರ್ ಮುಂದುವರಿಸಿ ಹೇಳಿದರು –ಆರ್ಎಸ್ಎಸ್ ನೋಂದಣಿ ಎಲ್ಲಿ ಅಂತ ಕೇಳಿದ್ರೆ ತಪ್ಪಾ? ಸಿಟಿ ರವಿ ಅಧಿವೇಶನದಲ್ಲಿ ಮಹಿಳೆ ಜೊತೆ ಹೇಗೆ ವರ್ತಿಸಿದ್ರು ನೋಡಿದ್ರಾ? ಇದು ನಿಮಗೆ ಆರ್ಎಸ್ಎಸ್ ಕಲಿಸಿದ ಸಂಸ್ಕಾರವೇ?”
ಎಂದು ಪ್ರಶ್ನಿಸಿದರು.
ಅವರು ಕೇಂದ್ರ ಸರ್ಕಾರದ ಅನುದಾನ ಹಂಚಿಕೆ, ಪಾರ್ಲಿಮೆಂಟ್ ದಾಳಿ ಮತ್ತು ಬಿಜೆಪಿ ನಾಯಕರ ಹೇಳಿಕೆಗಳನ್ನೂ ಟೀಕಿಸಿದರು.
ನಿಲ್ಲಿಸೋವರೆಗೂ ನಾನು ನಿಲ್ಲಿಸಲ್ಲ’ – ಪ್ರದೀಪ್ ಈಶ್ವರ್ ಘೋಷಣೆ
ಸಭೆಯ ಕೊನೆಯಲ್ಲಿ ಪ್ರದೀಪ್ ಈಶ್ವರ್ ಹೇಳಿದರು: ನೀನು ನಿಲ್ಲಿಸೋವರೆಗೂ ನಾನು ನಿಲ್ಲಿಸಲ್ಲ.
ನಾಳೆ ಮಾಧ್ಯಮಗೋಷ್ಠಿ ಮಾಡು ಮಗನೇ, ನಾನು ಕರೆಯುತ್ತೇನೆ. ನನ್ನ ತಾಯಿಗೆ ಕ್ಷಮೆ ಕೇಳು, ಇಲ್ಲ ಅಂದ್ರೆ ನಾನು ಮೌನವಾಗಿರುವುದಿಲ್ಲ,”
ಎಂದು ಕೋಪಭರಿತವಾಗಿ ಘೋಷಿಸಿದರು.
ಇದನ್ನು ನೋಡಿ : ಹೋಂ ಸ್ಟೇ ಬಾತ್ ರೂಮ್ನಲ್ಲಿ ಯುವತಿ ಅನುಮಾನಾಸ್ಪದ ಸಾವು




