BBK 12 : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ಮನೆ ಒಳಗಿನ ವಾತಾವರಣವೇ ಬದಲಾಗುತ್ತಿದೆ.

BBK 12 : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ಮನೆ ಒಳಗಿನ ವಾತಾವರಣವೇ ಬದಲಾಗುತ್ತಿದೆ. ಇತ್ತೀಚಿಗೆ ಮನೆಗೆ ಬಂದ ಹೊಸ ಸ್ಪರ್ಧಿಗಳಾದ ರಿಷಾ ಅವರು, ಗಿಲ್ಲಿ ನಟ, ಹಾಗೂ ಚಂದ್ರಪ್ರಭ ಅವರ ಆತ್ಮೀಯತೆ ಇತರೆ ಸ್ಪರ್ಧಿಗಳಲ್ಲಿ ಅಸಹನೆ ಮೂಡಿಸಿದೆ ಎಂದು ಕಾಣುತ್ತಿದೆ.
ಮೊನ್ನೆ ವಾರದಲ್ಲಿ ಜಾನ್ವಿ ಅವರು ಅಶ್ವಿನಿ ಜೊತೆ ಮಾತನಾಡುತ್ತಾ “ನಿನ್ನೆ ಮೊನ್ನೆ ಬಂದವರೆಲ್ಲ ಕ್ಯಾಪ್ಟನ್ ಆಗ್ತಿದ್ದಾರೆ” ಎಂದು ರಘು ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಇದರ ನಡುವೆ ವೈಲ್ಡ್ ಕಾರ್ಡ್ ಎಂಟ್ರಿಯಾದ ರಿಷಾ ಅವರು ಗಿಲ್ಲಿ ಹಾಗೂ ಚಂದ್ರಪ್ರಭರ ಜೊತೆ ನಿಕಟವಾಗಿರುವುದು ಜಾನ್ವಿ–ಅಶ್ವಿನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನು ಓದಿ : ರಕ್ಷಿತಾ ಶೆಟ್ಟಿ ಬುದ್ಧಿವಂತಿಕೆ ನೋಡಿ ಬೆರಗಾದ ರಘು

ಇದಾದ ಬಳಿಕ ಈ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಅವರು ಎಲ್ಲ ಸ್ಪರ್ಧಿಗಳಿಗೂ “ನಿಮ್ಮ ದೃಷ್ಟಿಕೋನದಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ಹೇಳಿ” ಎಂದು ಕೇಳಿದರು. ಈ ವೇಳೆ ಅಶ್ವಿನಿ, “ರಿಷಾ ಬಗ್ಗೆ ನನಗೆ ಪಾಸಿಟಿವ್ ಫೀಲ್ ಆಗಲಿಲ್ಲ” ಎಂದು ಹೇಳಿದರು. ತಕ್ಷಣ ಜಾನ್ವಿ, “ರಿಷಾ ಅವರು ಚಂದ್ರಪ್ರಭ ಅಥವಾ ಗಿಲ್ಲಿ ಜೊತೆಗೆ ಇರಬಹುದು, ಫನ್ ಆಗೇ ಇರುತ್ತಾರೆ, ಆದರೆ ನಮಗೆ ಕೆಲವೊಮ್ಮೆ ಅದು ಮುಜುಗರವಾಗುತ್ತದೆ” ಎಂದು ಸ್ಟೇಟ್ಮೆಂಟ್ ನೀಡಿದರು.
ಜಾನ್ವಿಯ ಈ ಹೇಳಿಕೆಗೆ ಕೆಂಡವಾದ ರಿಷಾ, “ನೀವು ಆಡಿದ್ರೆ ಆಟ, ನಾವು ಆಡಿದ್ರೆ ಅಸಹ್ಯನಾ? ನಾನು ನನ್ ತಾಕತ್ ತೋರಿಸ್ತೀನಿ!” ಎಂದು ಪ್ರತಿಕ್ರಿಯೆ ನೀಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ಉಲ್ಬಣಗೊಂಡಿತು.
ಈ ಎಲ್ಲವನ್ನು ಗಮನಿಸಿದ ಕಿಚ್ಚ ಸುದೀಪ್ ಮುಂದಿನ ಕ್ಷಣದಲ್ಲಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಈಗ ಪ್ರೇಕ್ಷಕರ ಕುತೂಹಲದ ವಿಷಯವಾಗಿದೆ.

ಇದನ್ನು ನೋಡಿ : ಕಿಚ್ಚ ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ: ರಣರಂಗವಾದ ಮನೆ




