Love Sex Dhokha : ‘ಲವ್ ಜಿಹಾದ್’ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

Love Sex Dhokha : ಬೆಂಗಳೂರಿನಲ್ಲಿ ನಡೆದ ‘ಲವ್ ಜಿಹಾದ್’ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಇಶಾಕ್ ಎಂದು ಗುರುತಿಸಲಾಗಿದೆ.
ಪರಿಚಯದಿಂದ ಪ್ರೀತಿವರೆಗೂ
ಮಾಹಿತಿಯ ಪ್ರಕಾರ, 2024ರ ಅಕ್ಟೋಬರ್ 17ರಂದು ಯುವತಿಗೆ ಮೊಹಮ್ಮದ್ ಇಶಾಕ್ ಪರಿಚಯವಾಗಿತ್ತು. ಈ ಪರಿಚಯ ಹಂತ ಹಂತವಾಗಿ ಸ್ನೇಹ ಮತ್ತು ಪ್ರೀತಿಯಾಗಿ ಬೆಳವಣಿಗೆಯಾಯಿತು.
ಮಾಲ್ನಲ್ಲಿ ಭೇಟಿ, ಬಳಿಕ ಸಲುಗೆ
2024ರ ಅಕ್ಟೋಬರ್ 30ರಂದು ಥಣಿಸಂದ್ರದ ಮಾಲ್ನಲ್ಲಿ ಇಬ್ಬರೂ ಭೇಟಿಯಾದರು. ಆ ಬಳಿಕ ಇಶಾಕ್ ಯುವತಿಯೊಂದಿಗೆ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ. ಆದರೆ ಬಳಿಕ ಆ ಭರವಸೆ ತಪ್ಪಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರು ಇದೆ.
ಮತಾಂತರದ ಒತ್ತಾಯ
ಘಟನೆ ಬಳಿಕ, ಇಶಾಕ್ ಯುವತಿಯನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ.
ಇದನ್ನು ಓದಿ : ಮುಳ್ಳು ಪೊದೆಗಳ ಮಧ್ಯೆ ಅಡಗಿಸಿಟ್ಟಿದ್ದ ಪಡಿತರ ಅಕ್ಕಿ ವಶ

ನಿಶ್ಚಿತಾರ್ಥದ ವಿಚಾರದಿಂದ ಸತ್ಯ ಬೆಳಕಿಗೆ
2025ರ ಸೆಪ್ಟೆಂಬರ್ 14ರಂದು ಇಶಾಕ್ ಮತ್ತೊಬ್ಬ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸಂತ್ರಸ್ಥೆಗೆ ತಿಳಿದು ಬಂದಿತು. ಈ ಕುರಿತು ಪ್ರಶ್ನಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಪೊಲೀಸ್ ದೂರು ಮತ್ತು ಪ್ರಕರಣ ವರ್ಗಾವಣೆ
ಸಂತ್ರಸ್ಥೆ ಈ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಕೃತ್ಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿ ವರ್ಗಾವಣೆ ಮಾಡಲಾಗಿದೆ.
ಆರೋಪಿಯ ಬಂಧನ
ಪೊಲೀಸರು ಇದೀಗ ಆರೋಪಿಯಾದ ಮೊಹಮ್ಮದ್ ಇಶಾಕ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಶಾಕ್ನ ಬಾವ ಕೂಡ ಸಂತ್ರಸ್ಥೆಗೆ ಪದೇಪದೇ ಮತಾಂತರಕ್ಕೆ ಒತ್ತಾಯ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ನೋಡಿ : ಲವ್ ಜಿಹಾದ್ ಆರೋಪ ಪ್ರಕರಣ.. ಬೆಂಗಳೂರಲ್ಲಿ ಆರೋಪಿ ಅರೆಸ್ಟ್




