Doddaballapur Shootout News: ಆಸ್ತಿ ವಿವಾದದಿಂದ ತಂದೆ ಮತ್ತು ಮಗನ ನಡುವೆ ನಡೆದ ವಾಗ್ವಾದ ಕೊನೆಗೆ ಭೀಕರ ಘಟನೆಯಾಗಿ ಅಂತ್ಯಗೊಂಡಿದೆ.

Doddaballapur Shootout News: ಆಸ್ತಿ ವಿವಾದದಿಂದ ತಂದೆ ಮತ್ತು ಮಗನ ನಡುವೆ ನಡೆದ ವಾಗ್ವಾದ ಕೊನೆಗೆ ಭೀಕರ ಘಟನೆಯಾಗಿ ಅಂತ್ಯಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ (Maralenahalli) ನಡೆದ ಈ ಘಟನೆಯಲ್ಲಿ ತಂದೆ ಮಗನ ತಲೆಗೆ ಗನ್ನಿಂದ ಗುಂಡು ಹಾರಿಸಿದ್ದಾರೆ.
ಆಸ್ತಿ ವಿಚಾರದಲ್ಲಿ ತಂದೆ ಫೈರಿಂಗ್ – ಮಗನಿಗೆ ಗಂಭೀರ ಗಾಯ
ಘಟನೆಯಲ್ಲಿ ಹರೀಶ್ (30) ಎಂಬ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆಸ್ತಿ ವಿವಾದದ ಹಿನ್ನೆಲೆ ತಂದೆ ಸುರೇಶ್ ಅವರು ಮಗನಾದ ಹರೀಶ್ ಮೇಲೆ ಹಳೆಯ ಲೋಡ್ ಗನ್ನಿಂದ ಫೈರಿಂಗ್ ಮಾಡಿದ್ದಾರೆ.
ಸ್ಥಳೀಯರು ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ.
MUST READ : Shringeri Mutt News: ಶೃಂಗೇರಿ ಶಾಖಾಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ ವಿಧಿವಶ
ಆಸ್ತಿ ಮಾರಾಟದ ವಿಚಾರವೇ ಕಲಹಕ್ಕೆ ಕಾರಣ
ತಂದೆ ಸುರೇಶ್ ಮದ್ಯ ಸೇವನೆಯ ಬಳಿಕ ಜಮೀನು ಮಾರಾಟಕ್ಕೆ ಒತ್ತಾಯಿಸುತ್ತಿದ್ದರು, ಇದಕ್ಕೆ ಮಗ ಹರೀಶ್ ವಿರೋಧ ವ್ಯಕ್ತಪಡಿಸಿದ್ದನು.
ಈ ವಿಚಾರದಲ್ಲಿ ತಂದೆ-ಮಗನ ನಡುವೆ ಮಾತಿನ ಚಕಮಕಿ ತೀವ್ರಗೊಂಡು, ಕೊನೆಗೆ ಸುರೇಶ್ ಗನ್ ತೆಗೆದು ಮಗನ ಮೇಲೆ ಶೂಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಂಡು ಹಾರಿಸಿದ ನಂತರ ತಂದೆ ಸುರೇಶ್ ಮನೆಯಿಂದ ಪರಾರಿಯಾಗಿದ್ದು,ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಮಾಹಿತಿ ಪ್ರಕಾರ, ಸುರೇಶ್ ವಿರುದ್ಧ ಕೊಲೆಯತ್ನದ ಪ್ರಕರಣ (Attempt to Murder Case) ದಾಖಲಿಸಲಾಗಿದೆ.
ಪೊಲೀಸರು ಗನ್ ಲೈಸೆನ್ಸ್ನ ಮಾನ್ಯತೆ ಕುರಿತು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣ ದಾಖಲು
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಆಸ್ತಿಯ ವಿವಾದಕ್ಕೆ ಸಂಬಂಧಿಸಿದ ಇತರೆ ಸಾಕ್ಷ್ಯಾಧಾರಗಳು ಹಾಗೂ ಕುಟುಂಬ ಸದಸ್ಯರ ಹೇಳಿಕೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಬಂಧನದ ಬಳಿಕ ಸುರೇಶ್ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
MUST WATCH : PARAMESHWAR | ಸಂಘರ್ಷ ತಡೆಗಟ್ಟಲು ಈ ತೀರ್ಮಾನ RSS ಬಗ್ಗೆ ಪರಂ ಶಾಕಿಂಗ್ ಹೇಳಿಕೆ




