
MYSURU DASARA 2025 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ನಡೆಯುವ ಯುವ ದಸರಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಯುವ ದಸರಾ ಕಾರ್ಯಕ್ರಮದ ಟಿಕೆಟ್ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿಅವರು ಮಾಹಿತಿ ನೀಡಿದ್ದು, ಈ ಬಾರಿ ಟಿಕೆಟ್ಗಳನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಮುಂಚಿತವಾಗಿ ಖರೀದಿಸಲು ಸಾಧ್ಯವಿ ಲ್ಲ.ಬದಲಿಗೆ, ಕಾರ್ಯಕ್ರಮ ನಡೆಯುವ ಸ್ಥಳವಾದ ಉತ್ತನಹಳ್ಳಿ ಮೈದಾನದಲ್ಲಿ ಅಂದು ನೇರವಾಗಿ ಟಿಕೆಟ್ ಮಾರಾಟ ನಡೆಯಲಿದೆ.
ಟಿಕೆಟ್ ದರ :
- ₹5,000
- ₹2,500
ಒಂದು ಟಿಕೆಟ್ನಿಂದ ಕೇವಲ ಒಬ್ಬರಿಗೆ ಮಾತ್ರ ಪ್ರವೇಶ ಸಿಗಲಿದೆ. ಟಿಕೆಟ್ ಹೊಂದಿರುವವರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಟಿಕೆಟ್ ಇಲ್ಲದವರಿಗೂ ಉಚಿತವಾಗಿ ಕಾರ್ಯಕ್ರಮ ವೀಕ್ಷಿಸಲು ಪೂರ್ವ ಸಿದ್ಧತೆ ಮಾಡಲಾಗಿದೆ. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ₹8,000, ₹5,000 ಮತ್ತು ₹2,500 ಟಿಕೆಟ್ ದರಗಳನ್ನು ನಿಗದಿ ಮಾಡಲಾಗಿತ್ತು, ಈ ಬಾರಿ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ ಎಂದು ಯುವ ದಸರಾ ಉಪ ಸಮಿತಿ ತಿಳಿಸಿದೆ.
ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 23 ರಿಂದ 27ರವರೆಗೆ ಐದು ದಿನಗಳ ಕಾಲ, ಮೈಸೂರಿನ ಉತ್ತನಹಳ್ಳಿ ಸಮೀಪದ ರಿಂಗ್ ರಸ್ತೆಯ ವಿಶಾಲ ಮೈದಾನದಲ್ಲಿಅದ್ಧೂರಿಯಾಗಿ ನಡೆಯಲಿದೆ.




