Volvo Bus Fire Accident Breaking Update : ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ಬೆಂಕಿಗಾಹುತಿಯಾಗಿದೆ

Volvo Bus Fire Accident Today: ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ಬೆಂಕಿಗಾಹುತಿಯಾಗಿದೆ.
ಈ ಭೀಕರ ಘಟನೆಯಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
Volvo Bus Fire Accident Breaking Update :ಶುಕ್ರವಾರ ಮುಂಜಾನೆ ಸುಮಾರು 2.45 ಗಂಟೆ ಸಮಯದಲ್ಲಿ, ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ವೋಲ್ವೊ ಬಸ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಚರಿಸುತ್ತಿತ್ತು.
ಈ ವೇಳೆ ಬಸ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಗಾಹುತಿಯಾಯಿತು.
ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಬಸ್ ಸಂಪೂರ್ಣವಾಗಿ ಧಗಧಗ ಹೊತ್ತಿ ಉರಿದಿದೆ.

ನಿದ್ರೆಯಿಂದ ಎಚ್ಚರವಾಯ್ತು, ಬಸ್ ಬೆಂಕಿಯ ಜ್ವಾಲೆ ತುಂಬಿತ್ತು – ಪ್ರಯಾಣಿಕರ ಅನುಭವ
ಪ್ರಯಾಣಿಕೆ ಹರಿಕಾ ಎನ್ಡಿಟಿವಿಗೆ ಮಾತನಾಡಿ,
“ನಾವು ನಿದ್ರಿಸುತ್ತಿದ್ದಾಗ ಏಕಾಏಕಿ ಬಸ್ ಬೆಂಕಿಗಾಹುತಿಯಾಯಿತು. ಸ್ಲೀಪರ್ ಬಸ್ನಲ್ಲಿರುವ ಪರದೆಗಳಿಂದ ಹೊರಗೆ ಏನಾಗುತ್ತಿದೆ ಎಂಬುದು ಕಾಣಿಸುತ್ತಿರಲಿಲ್ಲ. ಎಷ್ಟು ಜನ ಒಳಗಿದ್ದರು ಎಂಬುದನ್ನೂ ಅರಿಯಲಿಲ್ಲ,” ಎಂದರು.“ಬೆಂಕಿ ತೀವ್ರವಾಗಿ ಹರಡುತ್ತಿದ್ದುದರಿಂದ ಪ್ರಯಾಣಿಕರು ಹೊರಬರಲು ಹರಸಾಹಸ ಪಟ್ಟರು. ಕೆಲವರು ಕಿಟಕಿಯ ಗ್ಲಾಸ್ ಒಡೆದು ಪಾರಾದರು,” ಎಂದರು.
ಬೈಕ್ ಕೆಳಗೆ ಹೋಯಿತು -ಕಿಡಿಗಳು ಬರಲು ಪ್ರಾರಂಭಿಸಿದವು
ಮತ್ತೊಬ್ಬ ಪ್ರಯಾಣಿಕ ಸೂರ್ಯ ಮಾತನಾಡಿ
“ಬೆಳಗಿನ ಜಾವ 2.45 ಸುಮಾರಿಗೆ ಒಂದು ಬೈಕ್ ಬಸ್ಸಿನ ಕೆಳಗೆ ಹೋಯಿತು. ತಕ್ಷಣ ಕಿಡಿಗಳು ಬಂದು ಬೆಂಕಿ ವ್ಯಾಪಿಸಿತು. ಎಚ್ಚರವಿದ್ದವರು ಕೂಡಲೇ ಇಳಿದಿದ್ದಾರೆ. ಆದರೆ ಕೆಲವರು ಸಂಪೂರ್ಣವಾಗಿ ಸುಟ್ಟುಹೋಗಿದ್ದಾರೆ,” ಎಂದು ಹೇಳಿದ್ದಾರೆ.
ಬಸ್ ಒಳಗಿನ ಪರಿಸ್ಥಿತಿ ಭೀಕರ
ಇದು ಸ್ಲೀಪರ್ ವೋಲ್ವೊ ಬಸ್ ಆಗಿದ್ದರಿಂದ ಪ್ರತಿಯೊಂದು ಹಾಸಿಗೆಗೆ ಪರದೆ ಅಳವಡಿಸಲಾಗಿತ್ತು.
ಈ ಕಾರಣದಿಂದ, ಬೆಂಕಿ ಹೊತ್ತಿಕೊಳ್ಳುತ್ತಿದ್ದಾಗ ಪ್ರಯಾಣಿಕರಿಗೆ ಇತರರು ಒಳಗೆ ಇದ್ದಾರೋ ಇಲ್ಲವೋ ಎಂದು ತಿಳಿಯಲು ಸಾಧ್ಯವಾಗಲಿಲ್ಲ.
ಅನೆಕ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
MUST READ : BREAKING: ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ!

ಗಾಯಾಳುಗಳ ಚಿಕಿತ್ಸೆ ಮುಂದುವರಿಯುತ್ತಿದೆ
ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಕರ್ನೂಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಿ ಹಲವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಆತಂಕಕಾರಿಯಾಗಿದೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಧಾನಿಯಿಂದ ಆರ್ಥಿಕ ನೆರವು ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿ,
ಮೃತರ ಕುಟುಂಬಗಳಿಗೆ ₹2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ₹50 ಸಾವಿರ ರೂ. ನೆರವು ಘೋಷಿಸಿದ್ದಾರೆ.
ಅದೇ ವೇಳೆ, ಕಾವೇರಿ ಟ್ರಾವೆಲ್ಸ್ ಸಂಸ್ಥೆ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




